ನವದೆಹಲಿ, ಮಾ. 06 (Daijiworld News/MB) : ಥಾಯ್ಲೆಂಡ್ ಮತ್ತು ಮಲೇಷಿಯಾಗೆ ಪ್ರಯಾಣ ಬೆಳೆಸಿ ಹಿಂತಿರುಗಿದ ವ್ಯಕ್ತಿಯೊಬ್ಬರಿಗೆ ಕೊರೋನಾ ವೈರಸ್ ತಗಲಿರುವುದು ದೃಢ ಪಟ್ಟಿದ್ದು, ಈ ಮೂಲಕ ಭಾರತದಲ್ಲಿ ಕೊರೋನಾ ವೈರಸ್ ಸೋಂಕು ಪೀಡಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.
ವ್ಯಕ್ತಿಯು ದೆಹಲಿಯ ಉತ್ತಮ ನಗರ ನಿವಾಸಿಯಾಗಿದ್ದು ಥಾಯ್ಲೆಂಡ್ ಮತ್ತು ಮಲೇಷಿಯಾಗೆ ಪ್ರಯಾಣ ಬೆಳೆಸಿದ್ದರು. ಪ್ರಸ್ತು ಸೋಂಕು ಪೀಡಿತ ವ್ಯಕ್ತಿಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್ಗೆ ಪ್ರಯಾಣ ಬೆಳೆಸಿ ಹಿಂತಿರುಗಿದ ಘಾಜಿಯಾಬಾದ್ ಮೂಲದ ಮಧ್ಯ ವಯಸ್ಕ ವ್ಯಕ್ತಿಗೆ ಸೋಂಕು ತಗಲಿರುವುದು ಗುರುವಾರವಷ್ಟೇ ದೃಢಪಟ್ಟಿತ್ತು. ಸೆಂಟ್ರಲ್ ದೆಹಲಿಯಲ್ಲಿ ನಾಲ್ಕು ಪ್ರಕರಣಗಳು, ದೆಹಲಿಯಲ್ಲಿ ಎರಡು ಮತ್ತು ಘಾಜಿಯಾಬಾದ್ ಮತ್ತು ಗುರುಗ್ರಾಮದ ತಲಾ ಓರ್ವ ವ್ಯಕ್ತಿಗೆ ಸೋಂಕು ತಗಲಿದೆ.
ಬುಧವಾರದವರೆಗೂ ಇಟಲಿಯ 16 ಪ್ರವಾಸಿಗರು ಸೇರಿದಂತೆ ಭಾರತದಲ್ಲಿ 29 ಮಂದಿಗೆ ಕೊರೋನಾ ಸೋಂಕು ತಗಲಿದೆ. ದೇಶದಲ್ಲೇ ಮೊದಲ ಬಾರಿಗೆ ಸೋಂಕು ದೃಢಪಟ್ಟಿದ್ದ ಕೇರಳದ ಮೂವರು ಇತ್ತೀಚೆಗಷ್ಟೇ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ದೆಹಲಿಯ ಲೋಕ್ ನಾಯಕ್ ಜೈಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ ಕೊರೋನಾ ಸೋಂಕು ಪೀಡಿತರ ಚಿಕಿತ್ಸೆಗಾಗಿಯೇ 1 ಪ್ರತ್ಯೇಕ ಕೊಠಡಿ ಮತ್ತು ಪ್ರತ್ಯೇಕ ವಾರ್ಡ್ಗಳನ್ನು ತೆರೆಯಲಾಗಿದೆ ಎಂದು ಸರ್ಕಾರವು ತಿಳಿಸಿದೆ.