ಹೊಸಪೇಟೆ, ಮಾ.06 (DaijiworldNews/PY) : ಫೇಸ್ಬುಕ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ಅವಹೇಳನಕಾರಿ ಪೋಸ್ಟ್ ಮಾಡಿದ ತಾಲೂಕಿನ ವಡ್ಡರ ಹಳ್ಳಿ ನಿವಾಸಿ ನಬಿ ರಸೂಲ್ ಅವರ ಮನೆಗೆ ಶುಕ್ರವಾರ ಶ್ರೀರಾಮ ಸೇನೆಯ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ನಬಿ ಅವರನ್ನು ಮನೆಯಿಂದ ಹೊರಗೆ ಕರೆಸಿದ ಶ್ರೀರಾಮ ಸೇನೆಯ ಕಾರ್ಯಕರ್ತರು, ಗ್ರಾಮಸ್ಥರ ಸಮ್ಮುಖದಲ್ಲಿ ಕ್ಷಮೆ ಕೇಳಿಸಿ, ಬಳಿಕ ಭಾರತ್ ಮಾತಾಕೀ ಜೈ ಘೋಷಣೆ ಕೂಗಿಸಿದರು.
ಮೋದಿ ಅವರ ಭಾವಚಿತ್ರಗಳನ್ನು ನಬಿ ಅವರು ಎಡಿಟ್ ಮಾಡಿ, ಫೇಸ್ಬುಕ್ನಲ್ಲಿ ಅವರನ್ನು ಅಪಮಾನಿಸಿ ಪೋಸ್ಟ್ ಮಾಡಿದ್ದರು. ಈ ವಿಷಯ ತಿಳಿದು ನಬಿ ರಸೂಲ್ ಅವರ ಮನೆಗೆ ಹೋಗಿ ಅಲ್ಲಿ ಪ್ರತಿಭಟನೆ ನಡೆಸಿದ್ದು, ಗ್ರಾಮಸ್ಥರ ಸಮ್ಮುಖದಲ್ಲಿ ಕ್ಷಮೆ ಕೇಳಿಸಲಾಗಿದೆ. ಅಲ್ಲದೇ ಇಂತಹ ಘಟನೆಗಳು ಪುನಾರಾವರ್ತನೆ ಆಗಬಾರದೆಂದು ಎಚ್ಚರಿಕೆ ನೀಡಲಾಗಿದೆ ಎಂದು ಸೇನೆಯ ಕಾರ್ಯಾಧ್ಯಕ್ಷ ಅನೂಪ್ ಕುಮಾರ್ ತಿಳಿಸಿದರು.