ಮುಂಬೈ, ಮಾ.06 (DaijiworldNews/PY) : ಗ್ರಾಹಕರ ಹಣ ಸುರಕ್ಷಿತವಾಗಿದೆ. ಗಾಬರಿಪಡಬೇಡಿ ಎಂದು ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್, ಗ್ರಾಹಕರಲ್ಲಿ ವಿಶ್ವಾಸ ತುಂಬಲು ಪ್ರಯತ್ನಿಸುತ್ತಿದೆ.
ಹಣಕಾಸು ಬಿಕ್ಕಟ್ಟಿಗೆ ಸಿಲುಕಿರುವ ಬ್ಯಾಂಕ್ ಪುನಶ್ಚೇತನಗೊಳಿಸುವ ಕಾರ್ಯವನ್ನು ಶೀಘ್ರವೇ ಕಾರ್ಯಗತಗೊಳಿಸಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಭರವಸೆ ನೀಡಿದೆ.
ಇದಕ್ಕೆ 30 ದಿನಗಳ ಒಳಗೆ ಅತ್ಯಂತ ತ್ವರಿತ ಪರಿಹಾರ ಕಂಡುಕೊಳ್ಳಲಾಗುವುದು. ನೀವು ಆರ್ಬಿಐನಿಂದ ಸದ್ಯದಲ್ಲೇ ಕ್ಷಿಪ್ರ ಕ್ರಮ ಕಾಣುವಿರಿ ಎಂಬುದಾಗಿ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಬ್ಯಾಂಕಿಗ್ ವಲಯದ ಸ್ಥಿರತೆ, ದೇಶಿ ಹಣಕಾಸು ಹಾಗೂ ಸಂಕಷ್ಟದ ಪರಿಸ್ಥಿತಿಯಿಂದ ತ್ವರಿತವಾಗಿ ಹೊರಬರಲಿ ಎನ್ನುವ ಉದ್ದೇಶದಿಂದ ಬ್ಯಾಂಕ್ ವಹಿವಾಟಿಗೆ ನಿರ್ಬಂಧ ವಿಧಿಸಲಾಗಿದೆ. ನಮ್ಮ ಬ್ಯಾಂಕಿಂಗ್ ಕ್ಷೇತ್ರ ಸದೃಢ ಹಾಗೂ ಸುರಕ್ಷಿತವಾಗಿರುವ ವಿಚಾರವಾಗಿ ನಾನು ಭರವಸೆ ನೀಡಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.