ಮುಂಬೈ, ಮಾ.06 (DaijiworldNews/PY) : ಸಚಿನ್ ಜೋಶಿ ಅವರು ಮಾಡಿದ ಆರೋಪವನ್ನು ಅಲ್ಲಗಳೆದಿರುವ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಅವರು ಸುಳ್ಳು ಆರೋಪ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ರಾಜ್ ಕುಂದ್ರಾ ಅವರು, ಈ ಹೇಳಿಕೆಯಿಂದ ನನ್ನ ಘನತೆಗೆ ಧಕ್ಕೆ ಉಂಟಾಗಿದೆ. ಸಚಿನ್ ಜೋಶಿ ಅವರು ಈ ಮೊದಲು ಕೂಡಾ ನನ್ನ ಹೆಸರನ್ನು ಹಾಳುಗೆಡುವಂತಹ ಕೆಲಸವನ್ನು ಮಾಡಿದ್ಧಾರೆ ಎಂದು ಹೇಳಿದ್ದಾರೆ.
ಸತ್ಯುಗ್ ಗೋಲ್ಡ್ ಪ್ರೈವೇಟ್ ಲಿಮಿಟೆಡ್ನ ಎಲ್ಲಾ ದಾಖಲೆಗಳನ್ನು ಗ್ರಾಹಕರ ಮುಂದಿಡಲು ಬಯಸುತ್ತೇನೆ. ನಾನು ನಿರ್ದೇಶಕ ಹಾಗೂ ಹೂಡಿಕೆದರಾರನಾಗಿ ಚಿನ್ನವನ್ನು ಒದಗಿಸುವ ಯೋಜನೆಯನ್ನು ಪ್ರಾರಂಭಿಸಿದ್ದೆ. 100 ಗ್ರಾಹಕರಿಂದ ಪ್ರಾರಂಭವಾಗಿದ್ದ ಈ ಯೋಜನೆ ಯಾವುದೇ ದೂರು ಇಲ್ಲದೇ ಪೂರೈಸಲಾಗಿದೆ. ಆದರೆ, ಸಚಿನ್ ಜೋಶಿ ಅವರು ಹೇಗಾದರೂ ಮಾಡಿ ಚಿನ್ನವನ್ನು ಪಡೆಯುವ ಉದ್ದೇಶದಿಂದ ಪೊಲೀಸರಿಗೆ ಹಾಗೂ ಮಾಧ್ಯಮಗಳಿಗೆ ಸುಳ್ಳು ಸುದ್ದಿಯನ್ನು ನೀಡಿದ್ದಾರೆ. ಆದರೆ, ಸಚಿನ್ ಜೋಶಿ ಅವರ ಚಿನ್ನ ನಮ್ಮ ಬಳಿ ಸುರಕ್ಷಿತವಾಗಿದೆ. ನಿಯಮ 17,35,000 ರೂ ಪಾವತಿಸಿ ಅವರ ಚಿನ್ನವನ್ನು ಪಡೆದುಕೊಂಡು ಹೋಗಬಹುದು. ಇದರ ನಿಯಮ ಹಾಗೂ ಷರತ್ತುಗಳನ್ನು ನಮ್ಮ ವೆಬ್ಸೈಟ್ನಲ್ಲಿ ನೀಡಲಾಗಿದೆ ಎಂದರು.
ಸಚಿನ್ ಜೋಶಿ ವಿರುದ್ದದ ಚೆಕ್ ಬೌನ್ಸ್ ಪ್ರಕರಣದಿಂದಾಗಿ ಅವರು ಈ ರೀತಿಯಾಗಿ ಮಾಡಿದ್ಧಾರೆ. ಈ ಹಿಂದೆ ಅವರು ನನ್ನ ಕ್ರೀಡಾಕೂಟ ತಂಡವನ್ನು ಖರೀದಿಸುವುದರ ವಿರುದ್ದ 40 ಲಕ್ಷ ರೂ ಚೆಕ್ ಬೌನ್ಸ್ ಮಾಡಿದ್ದಾರೆ ಎಂದರು.
ನಮ್ಮ ಪ್ರಸ್ತುತ ವೆಬ್ಸೈಟ್ನಲ್ಲಿ ವಿಳಾಸವನ್ನು ಉಲ್ಲೇಖಿಸಲಾಗಿದೆ.
ಇಲ್ಲಿಯವರೆಗೆ ಸಚಿನ್ ಜೋಶಿ ಅವರನ್ನು ಹೊರತುಪಡಿಸಿ ಬೇರೆ ಯಾರೂ ಕೂಡಾ ಈ ವಿಚಾರವಾಗಿ ತೊಂದರೆ ಎದುರಿಸಿಲ್ಲ ಎಂದು ತಿಳಿಸಿದ್ದಾರೆ.