ಬೆಂಗಳೂರು ಮಾ 07 (DaijiworldNews/MSP): ಸೆನೆಗಲ್ನಲ್ಲಿ ಬಂಧಿಸಿ ನಗರಕ್ಕೆ ಕರೆತರಲಾಗಿರುವ ಭೂಗತ ಪಾತಕಿ ರವಿ ಪೂಜಾರಿಗೆ 14 ದಿನಗಳ ಅವಧಿಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ತಿಲಕ್ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಜೋಡಿ ಕೊಲೆ ಸಂಬಂಧ ರವಿ ಪೂಜಾರಿಯನ್ನು ಕಸ್ಟಡಿಗೆ ಪಡೆದು ಸಿಸಿಬಿ ಪೊಲೀಸರು, ವಿಚಾರಣೆ ನಡೆಸಿದ್ದರು. ಇದಲ್ಲದೆ ಬೆಂಗಳೂರಿನ ಶಬನಂ ಡೆವಲಪರ್ಸ್ನ ಉದ್ಯೋಗಿಗಳಾದ ಶೈಲಜಾ ಹಾಗೂ ರವಿ ಅವರ ಮೇಲೆ 2007ರಲ್ಲಿ ಮುಸುಕುಧಾರಿಗಳು ಗುಂಡಿನ ದಾಳಿ ನಡೆಸಿದ್ದರು. ಇದರಲ್ಲಿ ಇಬ್ಬರೂ ಮೃತಪಟ್ಟಿದ್ದರು. ಆ ಬಳಿಕ ‘ರವಿ ಪೂಜಾರಿ’ ಎಂಬ ಭಿತ್ತಿಪತ್ರವನ್ನು ಕಚೇರಿ ಗೋಡೆ ಮೇಲೆ ಅಂಟಿಸಿ ಆರೋಪಿಗಳು ಪರಾರಿಯಾಗಿದ್ದರು.
ಈ ಪ್ರಕರಣದಲ್ಲಿ ಪೂಜಾರಿ ಭಾಗಿಯಾಗಿದ್ದ ಮಾಹಿತಿ ಇತ್ತು. ಹೀಗಾಗಿ ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಯಿಗಿದೆ ಎಂದು ತಿಳಿದುಬಂದಿದೆ.
ಮಂಗಳೂರಿನಲ್ಲೂ ಕೊಲೆ , ಕೊಲೆ ಬೆದರಿಕೆ ಹಫ್ತಾ ವಸೂಲಿ ಸಹಿತ ೩೭ ಕೇಸ್ ಗಳಲ್ಲಿ ಆರೋಪಿಯಾಗಿದ್ದಾರೆ. ಹೀಗಾಗಿ ಮಂಗಳೂರು ಪೊಲೀಸರೇ ವಶಕ್ಕೆ ಪಡೆದು ಸಂಬಂಧಪಟ್ಟ ಪ್ರಕರಣಗಳ ವಿಚಾರಣೆ ನಡೇಸಲು ಬಾಡಿ ವಾರೆಂಟ್ ಮೂಲಕ ಸಿದ್ದತೆ ನಡೆಸಿದ್ದಾರೆ ಎಂದು ತಿಳಿದಿಬಂದಿದೆ.