ನವದೆಹಲಿ, ಮಾ. 07 (Daijiworld News/MB) : ದೆಹಲಿಯಲ್ಲಿ ಕಳೆದ ವಾರ ನಡೆದ ಹಿಂಸಾಚಾರ ಕುರಿತ ವರದಿಗೆ ಸಂಬಂಧಿಸಿ ಕೇಂದ್ರ ಸರ್ಕಾರವು ಎರಡು ಮಲಯಾಳಂ ಸುದ್ದಿವಾಹಿನಿಗಳ ಮೇಲೆ 48 ಗಂಟೆಗಳ ಕಾಲ ನಿಷೇಧ ವಿಧಿಸಿದ್ದು ಈ ಆರೋಪವನ್ನು ಅಲ್ಲಗಳೆದಿರುವ ಈ ಎರಡು ಮಾಧ್ಯಮಗಳು ಮಾಡಬೇಕಾದ ಕೆಲಸವನ್ನು ನಾವು ಮಾಡಿದ್ದೇವೆ. ಸತ್ಯವನ್ನೇ ತೋರಿಸಿದ್ದೇವೆ ಎಂದು ಹೇಳಿದೆ.
ಇನ್ನು ಕೇಂದ್ರ ಸರ್ಕಾರದ ಈ ಕ್ರಮವನ್ನು ಟೀಕೆ ಮಾಡಿರುವ ಕೇರಳ ಹಣಕಾಸು ಸಚಿವ ಥೊಮಸ್ ಐಸಾಕ್, "ಈ ಕ್ರಮ ನಿಷ್ಪಕ್ಷಪಾತ ವರದಿಯ ಮೂಲಕ ಹಿಂದುತ್ವ ಕೋಮುವಾದವನ್ನು ಎತ್ತಿ ತೋರಿಸಿದಕ್ಕಾಗಿ ಕೈಗೊಳ್ಳಲಾಗಿದೆ" ಎಂದು ಹೇಳಿದ್ದಾರೆ.
ಏಶ್ಯಾನೆಟ್ ನ್ಯೂಸ್ ಹಾಗೂ ಮೀಡಿಯಾ ಒನ್ ಈ ಎರಡು ಸುದ್ದಿ ವಾಹಿನಿಗಳು ದೆಹಲಿ ಹಿಂಸಾಚಾರದ ಬಗ್ಗೆ ಪ್ರಸಾರ ಮಾಡಿದ ವರದಿಗಳು ಪ್ರಚೋದನಕಾರಿ, ಪಕ್ಷಪಾತದಿಂದ ಕೂಡಿದ್ದವು. ಹಾಗೆಯೇ ಆರ್ಎಸ್ಎಸ್, ದೆಹಲಿ ಪೊಲೀಸರನ್ನು ಟೀಕೆ ಮಾಡಿದೆ. ಒಂದು ನಿರ್ದಿಷ್ಟ ಸಮುದಾಯದ ಪರವಹಿಸಿದ್ದವು. ಅಷ್ಟು ಮಾತ್ರವಲ್ಲದೆ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಗರನ್ನು ಕೆಟ್ಟದಾಗಿ ಬಿಂಬಿಸಿದೆ ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ತನ್ನ ಈ ನಿಷೇದ ಆದೇಶದಲ್ಲಿ ಆರೋಪ ಮಾಡಿದೆ.