ನವದೆಹಲಿ, ಮಾ 07 (DaijiworldNews/MSP): ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಕಳೆದ ವರ್ಷ 40 ಮಂದಿ ಸಿಆರ್'ಪಿಎಫ್ ಸಿಬ್ಬಂದಿಯನ್ನು ಬಲಿ ಪಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ದಾಳಿಯ ಬಳಕೆ ಆಗಿದ್ದ ಸ್ಪೋಟಕಗಳನ್ನು ಉಗ್ರರು ಆನ್ ಲೈನ್ ಮೂಲಕ ಅರ್ಡರ್ ಮಾಡಿದ್ದರು ಎನ್ನಲಾಗಿದೆ.
ಪುಲ್ವಾಮಾದಲ್ಲಿ ದಾಳಿ ನಡೆಸಿದ್ದ ಇಬ್ಬರು ಆರೋಪಿಗಳನ್ನು ಎನ್ಐಎ ಅಧಿಕಾರಿಗಳು ನಿನ್ನೆಯಷ್ಟೇ ಬಂಧನಕ್ಕೊಳಪಡಿಸಿ ವಿಚಾರಣೆಗೊಳಪಡಿಸಿದ್ದು, ಈ ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳನ್ನು ಆರೋಪಿಗಳು ಬಿಚ್ಚಿಟ್ಟಿದ್ದಾರೆ.
ವಿಚಾರಣೆ ವೇಲೆ ಆರೋಪಿಗಳು ತಾವು ಬಾಂಬ್ ತಯಾರಿಕೆಗೆ ಬೇಕಾದ ಅಗತ್ಯ ರಾಸಾಯನಿಕ ವಸ್ತುಗಳನ್ನು, ಬ್ಯಾಟರಿಗಳು ಮತ್ತು ಇತರೆ ಉಪಕರಣಗಳನ್ನು ಪಾಕಿಸ್ತಾನದ ಜೈಷ್ ಇ ಮೊಹಮ್ಮದ್ ಉಗ್ರರ ನಿರ್ದೇಶನದಂತೆ ಅಮೆಜಾನ್ ನಲ್ಲಿ ಆನ್ ಮೈನ್ ಮೂಲಕ ತರಿಸಿಕೊಂಡಿದ್ದೆವು ರಾಷ್ಟ್ರೀಯ ತನಿಖಾ ದಳ ನಡೆಸಿದ ತನಿಖೆಯ ವೇಳೆ ಎಂದು ಹೇಳಿದ್ದಾರೆ.
ಪುಲ್ವಾಮಾ ದಾಳಿಯ ಭಾಗವಾಗಿ ತರಿಸಲಾದ ವಸ್ತುಗಳನ್ನು ತಾವೇ ಸ್ವತಃ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕರಿಗೆ ತಲುಪಿಸಿರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆಂದು ತನಿಖೆಯ ವೇಳೆ ತಿಳಿದುಬಂದಿದೆ.