ನವದೆಹಲಿ, ಮಾ. 07 (Daijiworld News/MB) : ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್)ನಲ್ಲಿ ತನ್ನ ಶೇ.52.98 ಷೇರುಗಳನ್ನು ಮಾರಾಟ ಮಾಡಲು ಭಾರತ ಸರ್ಕಾರ ಶನಿವಾರ ತೀರ್ಮಾನ ಕೈಗೊಂಡಿದೆ.
ಬಿಪಿಸಿಎಲ್ ಷೇರು ಕೊಳ್ಳುವ ಆಸಕ್ತಿಯ ಹೊಂದಿದವರನ್ನು ಮೇ.2 ಒಳಗೆ ಆಹ್ವಾನಿಸಲಾಗಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಹರಾಜು ದಾಖಲೆಯಲ್ಲಿ ತಿಳಿಸಿದೆ.
ಈ ಮೂಲಕ ಭಾರತ ಸರ್ಕಾರ ಬಿಪಿಸಿಎಲ್ನಲ್ಲಿ ಹೂಡಿಕೆ ಮಾಡಿರುವ ₹114.91 ಕೋಟಿ ಮೌಲ್ಯದ ಬಂಡವಾಳವಾಳ ಹಿಂಪಡೆಯಲು ತೀರ್ಮಾನಿಸಿದಂತಾಗಿದೆ.