ಒಡಿಸ್ಸಾ, ಮಾ 07 (DaijiworldNews/MSP): ಕರೋನ ವೈರಸ್ ಸೋಂಕು ತಗುಲಿರಬಹುದು ಎಂದು ಶಂಕಿಸಲ್ಪಟ್ಟು ಚಿಕಿತ್ಸೆಗಾಗಿ ಎಸ್ಸಿಬಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿ ಅಲ್ಲಿಂದ ಬಳಿಕ ಪರಾರಿಯಾಗಿದ್ದ ಐರಿಶ್ ಪ್ರಜೆಯನ್ನು ಪೊಲೀಸರು ಭುವನೇಶ್ವರದ ಹೋಟೆಲೊಂದರಲ್ಲಿ ಪತ್ತೆ ಹಚ್ಚಿದ್ದಾರೆ.
ಸಾಂದರ್ಭಿಕ ಚಿತ್ರ
ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿದಾಗ ಅವರ ದೇಹದ ಉಷ್ಣತೆಯು ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಾಗಿ ಕಂಡು ಬಂದ ಹಿನ್ನಲೆಯಲ್ಲಿ ಐರಿಶ್ ಪ್ರಜೆಯನ್ನು ಆಸ್ಪತ್ರೆಗೆ ತಪಾಸಣೆಗಾಗಿ ಕರೆತರಲಾಗಿತ್ತು. ಅಲ್ಲಿ ತಪಾಸಣೆ ನಡೆಸಿದ ಬಳಿಕ ಅವರನ್ನು ಭುವನೇಶ್ವರ ಕ್ಯಾಪಿಟಲ್ ಆಸ್ಪತ್ರೆಗೆ ಕಳುಹಿಸಲಾಯಿತು ಮತ್ತು ನಂತರ ಚಿಕಿತ್ಸೆಗಾಗಿ ಕಟಕ್ನ ಎಸ್ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದಾಗ್ಯೂ, ಆತ ಗುರುವಾರ ರಾತ್ರಿ ತಮ್ಮ ಆಸ್ಪತ್ರೆಯಿಂದ ತಪ್ಪಿಸುಕೊಳ್ಳಲ್ಲಿ ಯಶಸ್ವಿಯಾಗಿದ್ದ. ಆತನಿಗಾಗಿ ಹುಡುಕಾಡಿದ ಆಸ್ಪತ್ರೆಯ ಅಧಿಕಾರಿಗಳು ಬಳಿಕ ಮಂಗ್ಲಾಬಾದ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದರು.
ಎಸ್ಸಿಬಿ ಆಸ್ಪತ್ರೆ ಕಾಲೇಜಿನ ತುರ್ತು ಅಧಿಕಾರಿ ಭುವನ್ ಮೊಹರಾನಾ "ವಿದೇಶಿ ಪ್ರಜೆಯನ್ನು ಕ್ಯಾಪಿಟಲ್ ಆಸ್ಪತ್ರೆಯಿಂದ ನಮ್ಮ ಎಸ್ಸಿಬಿ ಆಸ್ಪತ್ರೆಗೆ ಕರೆತರಲಾಯಿತು. ಐರಿಶ್ ಪ್ರಜೆ ನೆಲಮಹಡಿಯಲ್ಲಿ ಇದ್ದು ಅಲ್ಲಿಗೆ ವೈದ್ಯರು ತಲುಪಿದಾಗ ಶಂಕಿತ ವ್ಯಕ್ತಿ ಕಾಣೆಯಾಗಿದ್ದ" ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.