ನವದೆಹಲಿ, ಮಾ 07 (DaijiworldNews/MSP): ಗೂಗಲ್ ಸಂಸ್ಥೆಯ ಒಡೆತನದ ಗೂಗಲ್ ಪೇ ಹಣ ವರ್ಗಾವಣೆಗೆ ಅತ್ಯುತ್ತಮ ಡಿಜಿಟಲ್ ಪ್ಲಾಟ್ಫಾರ್ಮ್ ಆಗಿದೆ. ಆದರೆ ಇದೀಗ ಗೂಗಲ್ ಪೇನಲ್ಲಿ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡುವ ಆಯ್ಕೆ ಕಾಣಿಸುತ್ತಿಲ್ಲ ಹೀಗಾಗಿ ಗ್ರಾಹಕರು ಗೊಂದಲಕ್ಕೆ ಒಳಗಾಗಿದ್ದಾರೆ.
ಏಕಾಏಕಿ ಗೂಗಲ್ ಪೇ ನಲ್ಲಿ ಬಳಕೆದಾರರ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡುವ ಆಯ್ಕೆ ಮಾಯಾವಾಗಿದ್ದು ಯಾಕೆ ಎಂದು ನಿನ್ನೆಯಿಂದ ಗ್ರಾಹಕರು ತಲೆಕೆಡಿಸಿಕೊಂಡಿದ್ದಾರೆ. ಇದರ ನಡುವೆ ಗೂಗಲ್ ಪೇ ಬ್ಯಾಲೆನ್ಸ್ ಚೆಕ್ ಫೀಚರ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಬಗ್ಗೆ ಗೂಗಲ್ ಪೇ ಇಂಡಿಯಾ ಟ್ವಿಟ್ ಮಾಡಿದೆ.
ಆದರೆ ಈ ಬಗ್ಗೆ ಬಳಕೆದಾರರು ಗಾಬರಿಪಡಬೇಕಾದ ಅವಶ್ಯಕತೆ ಇಲ್ಲ , ಅಕೌಂಟ್ ಬ್ಯಾಲೆನ್ಸ್ ಫೀಚರ್ ಅನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ ಎಂದು ಹೇಳಿಕೊಂಡಿದೆ.
ಯುಪಿಐನಲ್ಲಿ ಹೆಚ್ಚಿನ ಒತ್ತಡ ಇರುವುದರಿಂದ, ನಾವು ಸಧ್ಯ 'ಚೆಕ್ ಅಕೌಂಟ್ ಬ್ಯಾಲೆನ್ಸ್' ಫೀಚರ್ ನ್ನು ತಾತ್ಕಾಲಿಕವಾಗಿ ಆಫ್ ಮಾಡುತ್ತಿದ್ದೇವೆ. ಈ ಆಯ್ಕೆಯನ್ನು ಶೀಘ್ರದಲ್ಲೇ ಮರುಸ್ಥಾಪನೆಗೊಳ್ಳಲಿದೆ. ಬಳಕೆದಾರರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ಎಂದು ಗೂಗಲ್ ಪೇ ಬ್ಯಾಲೆನ್ಸ್ ಚೆಕ್ ಫೀಚರ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಬಗ್ಗೆ ಗೂಗಲ್ ಪೇ ಇಂಡಿಯಾ ಟ್ವಿಟ್ ಮಾಡಿದೆ.
ಈ ಫೀಚರ್ ಕೇವಲ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರಿಗೆ ಮಾತ್ರ ಕಾಣಿಸುತ್ತಿಲ್ಲ. ಆದರೆ ಐಫೋನ್ನ ಗೂಗಲ್ ಪೇ ಆಪ್ನಲ್ಲಿ ಚೆಕ್ ಬ್ಯಾಲೆನ್ಸ್ ಫೀಚರ್ ಎಂದಿನಂತೆ ಕಾರ್ಯಚರಿಸಿಸುತ್ತಿದೆ.