ಬೆಳಗಾವಿ, ಮಾ.07 (DaijiworldNews/PY) : "ಬಿಎಸ್ವೈ ಸರ್ಕಾರ ದರಿದ್ರ ಸರ್ಕಾರ ಎಂದು ಸಿದ್ದರಾಮಯ್ಯ ಸುಮ್ಮನೆ ಟೀಕೆ ಮಾಡುವುದು ಸರಿಯಲ್ಲ. ನಮ್ಮದು ದರಿದ್ರ ಸರ್ಕಾರ ಆಗಿದ್ದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಾದಾಮಿ ಕ್ಷೇತ್ರಕ್ಕೆ 630 ಕೋಟಿ ಅನುದಾನ ನೀಡಲು ಸಾಧ್ಯವಾಗುತ್ತಿರಲಿಲ್ಲ. ನಮ್ಮದು ಬೊಗಳೆ ಬಿಡುವ ಸರ್ಕಾರವಲ್ಲ" ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಮ್ಮದು ಸುಭದ್ರ ಸರ್ಕಾರ. ಬೊಗಳೆ ಬಿಡುವ ಸರ್ಕಾರವಲ್ಲ. ಸಿಎಂ ಬಿಎಸ್ವೈ ಅವರು ಸದ್ಯದ ಆರ್ಥಿಕ ಪರಿಸ್ಥಿಗೆ ಅನುಗುಣವಾಗಿ ಬಜೆಟ್ ಮಂಡನೆ ಮಾಡಿದ್ದಾರೆ. ಸಮಾನವಾಗಿ ಎಲ್ಲಾ ಕ್ಷೇತ್ರಗಳಿಗೂ ಅನುದಾನ ಹಂಚಿಕೆ ಮಾಡಿದ್ದಾರೆ. ಉತ್ತರ ಕರ್ನಾಟಕವನ್ನು ಕಡೆಗಣನೆ ಮಾಡಿಲ್ಲ. ಒಮ್ಮೆಯೇ ಎಲ್ಲವನ್ನು ಪರಿಹಾರ ಮಾಡಲು ಆಗುವುದಿಲ್ಲ. ನಮ್ಮ ಸರ್ಕಾರ ಹಂತ ಹಂತವಾಗಿ ಕ್ರಮ ತೆಗೆದುಕೊಳ್ಳುತ್ತಿದೆ" ಎಂದು ತಿಳಿಸಿದರು.