ಬೆಂಗಳೂರು, ಮಾ 8 (Daijiworld News/MSP): ಕೊರೊನಾದಿಂದ ಪಾರಾಗಲು ಜಗತ್ತೇ ನಾನಾ ದಾರಿಗಳನ್ನು ಹುಡುಕುತ್ತಿದೆ. ಅದರೂ ಕೊರೊನಾ ಪ್ರಪಂಚದೆಲ್ಲೆಡೆ ತನ್ನ ಕಬಂಧಬಾಹುಗಳನ್ನು ಚಾಚುತ್ತಿದೆ. ಈವರೆಗೆ ಜಗತ್ತಿನಾದ್ಯಂತ 3,491 ಜನ ಕೊರೋನಾ ಸೋಂಕಿಗೆ ಬಲಿಯಾಗಿದ್ರೆ, 1,01,988 ಕ್ಕೂ ಹೆಚ್ಚು ಜನ ಸೋಂಕು ಪೀಡಿತರಿದ್ದಾರೆ.
ಈ ನಡುವೆ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲೆಡೆ ಜಾಗೃತಿ ಕಾರ್ಯಗಳು ನಡೆಯುತ್ತಿವೆ. ಮೊಬೈಲ್ ಕಾಲರ್ ಟ್ಯೂನ್ ನಲ್ಲಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಕೇಂದ್ರ ಸರಕಾರದ ಸೂಚನೆ ಮೇರೆಗೆ ಶನಿವಾರ ದಿಂದ ಬಿಎಸ್ಎನ್ಎಲ್, ಜಿಯೋ ಟೆಲಿಕಾಂ ಸಂಸ್ಥೆಗಳು ತನ್ನ ಸಿಮ್ಗಳ ಕಾಲರ್ ಟ್ಯೂನ್ ಮೂಲಕ ಕೊರೊನಾ ಜಾಗೃತಿ ಅಭಿಯಾನ ಆರಂಭಿಸಿವೆ.
ವೈಯಕ್ತಿಕ ಕಾಲರ್ ಟೋನ್ ಹೊಂದದ ಶೇ.40 ಗ್ರಾಹಕರ ಮೊಬೈಲ್ ನಂಬರ್ ಗಳಲ್ಲಿ ಮೊದಲು ಕೆಮ್ಮವುದು ಕೇಳಿಸುತ್ತದೆ. ಬಳಿಕ ಕರವಸ್ತ್ರ ಬಳಕೆ, ಬಳಿಕ ಸೋಪ್ನಿಂದ ಕೈ ತೊಳೆಯಬೇಕು ಹಾಗೂ ಜ್ವರ ಶಿತವಿರುವ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳುವ ಸಹಿತ ಆರೋಗ್ಯ ಜಾಗೃತಿಯ ವಿಚಾರಗಳನ್ನು ಕಾಲರ್ ಟ್ಯೂನ್ನಲ್ಲಿ ಹೇಳಲಾಗಿದೆ. ಮೊಬೈಲ್ ಕಂಪೆನಿಗಳೇ ಈ ಘೋಷವನ್ನು ಕಾಲರ್ ಟ್ಯೂನ್ನಲ್ಲಿ ಅಳವಡಿಕೆ ಮಾಡಿವೆ.