ಚಾಮರಾಜನಗರ, ಮಾ 8 (Daijiworld News/MSP): ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರನ್ನು ಈ ನೆಲದಿಂದ ಹೊರಗೋಡಿಸಲು ಅಂದು ಮುಸ್ಲಿಮರು ಬೀದಿಗಿಳಿದು ಸಂಗ್ರಾಮದಲ್ಲಿ ಭಾಗವಹಿಸಿದ್ದರು. ಈಗ ನಮ್ಮ ದೇಶದಲ್ಲಿ ಪ್ರಧಾನಿ ಮೋದಿಯಂತಹವರನ್ನು ಒದ್ದೋಡಿಸಲು ಮುಸ್ಲಿಮರು ಬೀದಿಗಿಳಿಯಬೇಕಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕರೆ ನೀಡಿದ್ದಾರೆ.
ಅವರು ಚಾಮರಾಜನಗರದಲ್ಲಿ ನಡೆದ ಸಿಎಎ, ಎನ್ ಪಿಆರ್, ಎನ್ಆರ್ ಸಿ ವಿರೋಧಿಸಿ ಸಂವಿಧಾನ ಸಂರಕ್ಷಣಾ ಸಮಾವೇಶದಲ್ಲಿ ಮಾತನಾಡಿ, ನಮ್ಮ ದೇಶಕ್ಕೆ ಯಾವುದೇ ಗಂಡಾಂತರ ಇಲ್ಲದೆ ಇರುವ ಪ್ರಿಸ್ಥಿತಿಯಲ್ಲಿ, ಮೋದಿ ಪೌರತ್ವ ತಿದ್ದುಪಡಿಯಂತಹ ಕಾಯ್ದೆ ಜಾರಿಗೆ ತಂದಿದ್ದಾರೆ, ಹೀಗಾಗಿ ಈ ರೀತಿಯ ಸರ್ಕಾರದ ವಿರುದ್ಧ ಸಮರ ಸಾರಬೇಕಾಗಿದೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ
ನೋಟ್ ಬ್ಯಾನ್ ಕಾಯಿದೆ, ತ್ರಿವಳಿ ತಲಾಕ್, 370 ಆಕ್ಟ್ ನಂಥಹ ಅನೇಕ ಜನವಿರೋಧಿ ಕಾಯ್ದೆ ತಂದರೂ ಮುಸ್ಲಿಮರು ಪ್ರತಿಭಟಿಸಲಿಲ್ಲ. ಈಗ ಸಿಎಎ ಹಾಗೂ ಎನ್ಆರ್ಸಿ ಜಾರಿಗೆ ಮುಸ್ಲಿಮರು ಒಟ್ಟಾಗಿ ಪ್ರತಿಭಟನೆ ನಡೆಸು ಸಂದರ್ಭ ಬಂದಿದೆ. ಪ್ರಧಾನಿ ಮೋದಿ ಅಂದು ಬ್ರಿಟಿಷರ ವಿರುದ್ದ ಹೋರಾಡಿದವರನ್ನ ಇಂದು ಬೀದಿಯಲ್ಲಿ ನಿಲ್ಲಿಸಿದ್ದಾರೆ. ಮೋದಿಯಂತಹವರನ್ನು ಒದ್ದೋಡಿಸಲು ಮುಸ್ಲಿಮರೆಲ್ಲರೂ ಒಟ್ಟಾಗಬೇಕಿದೆ ಎಂದು ರಮೇಶ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.