ತಿರುವನಂತಪುರ,ಮಾ. 08 (Daijiworld News/MB) : ಭಾರತದ ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆಯಾದ ಕೇರಳದಲ್ಲಿ ಇದೀಗ ಕುಟುಂಬವೊಂದರ ಐವರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು ದೇಶದಲ್ಲಿ ಪೀಡಿತರ ಸಂಖ್ಯೆ 39ಕ್ಕೇರಿಕೆಯಾಗಿದೆ.
ಕೊರೊನಾ ವೈರಸ್ ತಗುಲಿದ ಐದು ಜನರು ಒಂದೇ ಕುಟುಂಬದವರಾಗಿದ್ದಾರೆ. ಈ ಐವರ ಪೈಕಿ ಮೂವರು ಈ ಮೊದಲು ಇಟಲಿಗೆ ತೆರಳಿದ್ದರು. ಈ ವೇಳೆ ಅವರಿಗೆ ಕೊರೊನಾ ವೈರಸ್ ತಗುಲಿರಬಹುದು ಎಂದು ಶಂಕಿಸಲಾಗಿದೆ. ಇವರನ್ನು ಸಂಪರ್ಕಿಸಿದ ಎಲ್ಲರನ್ನೂ ಸದ್ಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ವೈರಸ್ ಪತ್ತೆಯಾದವ ಐವರ ಪೈಕಿ ಮಗು ಕೂಡಾ ಸೇರಿದೆ.
ಕುಟುಂಬವು ಏರ್ಪೋರ್ಟ್ನಲ್ಲಿ ತಮ್ಮ ಪ್ರಯಾಣದ ಕುರಿತಾಗಿ ಯಾವುದೇ ಮಾಹಿತಿ ನೀಡಿರಲಿಲ್ಲ. ಆ ಹಿನ್ನಲೆಯಲ್ಲಿ ಅವರ ತಪಾಸಣೆ ಮಾಡಿರಲಿಲ್ಲ. ಇಟಲಿಯಿಂದ ಬಂದಿರುವ ಕುಟುಂಬ ಸದಸ್ಯರು ಆರಂಭದಲ್ಲಿ ಹಾಸ್ಪಿಟಲ್ಗೆ ದಾಖಲಾಗಲು ನಿರಾಕರಿಸಿದ್ದಾರೆ. ನಾವು ಅವರ ಮನವೊಲಿಸಿದ್ದೇವೆ" ಎಂದು ರಾಜ್ಯ ಆರೋಗ್ಯ ಸಚಿವೆ ಕೆಕೆ ಶೈಲಜಾ ತಿಳಿಸಿದ್ದಾರೆ.