ಮುಂಬೈ, ಮಾ. 08 (Daijiworld News/MB) : ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಖಾಸಗಿ ಯೆಸ್ ಬ್ಯಾಂಕ್ನ ಎಲ್ಲಾ ವ್ಯವಹಾರಗಳು ಸ್ಥಗಿತಗೊಂಡಿದ್ದು ಕಳೆದೆರಡು ದಿನಗಳಿಂದ ಹಣವಿಲ್ಲದೇ ಪರದಾಡುತ್ತಿದ್ದ ಯೆಸ್ ಬ್ಯಾಂಕ್ ಗ್ರಾಹಕರಿಗೆ ಬ್ಯಾಂಕ್ ಈಗ ಕೊಂಚ ರಿಲೀಫ್ ನೀಡಿದೆ.
ಯೆಸ್ ಬ್ಯಾಂಕ್ ತನ್ನ ಟ್ವೀಟ್ ಮೂಲಕ "ಗ್ರಾಹಕರು ಯೆಸ್ ಬ್ಯಾಂಕ್ ಮಾತ್ರವಲ್ಲದೇ, ಇತರ ಬ್ಯಾಂಕ್ ಎಟಿಎಂಗಳಿಂದಲೂ ಹಣ ವಿತ್ ಡ್ರಾ ಮಾಡಬಹುದು. ನಿಮ್ಮ ತಾಳ್ಮೆಗಾಗಿ ಧನ್ಯವಾದಗಳು" ಎಂದು ತಿಳಿಸಿದೆ.
ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಯೆಸ್ ಬ್ಯಾಂಕ್ ಆಡಳಿತವನ್ನು ಆರ್ಬಿಐ ತನ್ನ ವಶಕ್ಕೆ ಪಡೆದುಕೊಂಡು ತಿಂಗಳಿಗೆ ಕೇವಲ 50 ಸಾವಿರ ರೂ. ವಿತ್ ಡ್ರಾ ಮಿತಿಯನ್ನು ಗ್ರಾಹಕರಿಗೆ ಹೇರಿದೆ.
ಆದರೆ ಈಗ ಹಣವನ್ನು ಯೆಸ್ ಬ್ಯಾಂಕ್ ಹಾಗೂ ಬೇರೆ ಬ್ಯಾಂಕ್ ಎಟಿಎಂಗಳಿಂದಲ್ಲೂ ಡ್ರಾ ಮಾಡಬಹುದು ಎಂದು ಹೇಳಿರುವುದು ಗ್ರಾಹಕರಿಗೆ ಕೊಂಚ ರಿಲೀಫ್ ನೀಡಿದೆ.