ನವದೆಹಲಿ, ಮಾ 8 (Daijiworld News/MSP): ಯೆಸ್ ಬ್ಯಾಂಕ್ ನ ಬಿಕ್ಕಟ್ಟು ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಬಂಧಿಸಲಾಗಿರುವ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರನ್ನು ವಿಶೇಷ ನ್ಯಾಯಾಲಯ ಮಾರ್ಚ್ 11ರವರೆಗೆ ಇಡಿ ಕಸ್ಟಡಿ ವಶಕ್ಕೆ ಒಪ್ಪಿಸಿದೆ. ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ನೀಡುವಂತೆ ಮನವಿ ಸಲ್ಲಿಸಿದ್ದರು.
ಯೆಸ್ ಬ್ಯಾಂಕ್ ಆಡಳಿತವನ್ನು ಆರ್ ಬಿಐ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ , ಬ್ಯಾಂಕ್ ಕಾರ್ಯನಿರ್ವಹಣೆಯಲ್ಲಿ ನಿಯಮಗಳ ಉಲ್ಲಂಘನೆ, ಆಡಳಿತ ದುರುಪಯೋಗ ಮತ್ತಿತರ ಆರೋಪಗಳು ಕೇಳಿಬಂದ ನಂತರ ರಾಣಾ ಕಪೂರ್ ಅವರನ್ನು ಬಂಧಿಸಲಾಗಿತ್ತು. ಬ್ಯಾಂಕ್ ನಷ್ಟದಲ್ಲಿದ್ದರೂ ಡಿಹೆಚ್ ಎಫ್ ಎಲ್ ಸಂಸ್ಥೆಗೆ ಸಾಲ ನೀಡಿತ್ತು. ಇದಕ್ಕಾಗಿ ರಾಣಾ ಕಪೂರ್ ಅ ಕಿಕ್ ಬ್ಯಾಕ್ ಪಡೆದಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿತ್ತು
ಕಪೂರ್ ಪತ್ನಿ ಬಿಂದು ಮತ್ತು ಪುತ್ರಿಯರಾದ ರಾಖಿ ಕಪೂರ್, ಟಂಡನ್, ರೊಷಿನಿ ಕಪೂರ್ ಮತ್ತು ರಾಧಾ ಕಪೂರ್ ಕೂಡಾ ಕೆಲ ಕಂಪನಿಗಳೊಂದಿಗೆ ಅಕ್ರಮ ನಂಟು ಹೊಂದಿರುವ ಆರೋಪ ಕೇಳಿಬಂದಿದೆ.