ನವದೆಹಲಿ, ಮಾ.08 (DaijiworldNews/PY) : ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಹೊಂದಿದ್ದು, ಯಾವುದೇ ವ್ಯವಹಾರಗಳಿಗೆ ಉಪಯೋಗಿಸದೇ ಇದ್ದಲ್ಲಿ, ಅದನ್ನು ಉಪಯೋಗಿಸಿ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳನ್ನು ಯಾವುದೇ ವ್ಯವಹಾರಗಳಿಗೆ ಬಳಸದೇ ಇದ್ದಲ್ಲಿ ಮಾ.16ರಿಂದ ಅಂತಹ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಇದು ಆರ್ಬಿಐ ಜ.15ರಂದು ಹೊರಡಿಸಿದ ಅಧಿಸೂಚನೆಯಾಗಿದೆ.
ಆರ್ಬಿಐಯ ಅಧಿಸೂಚನೆಯ ಪ್ರಕಾರ, ಮಾ.16ರಿಂದ ಹಿಂದೆ ಯಾವುದೇ ಆನ್ಲೈನ್ ಹಾಗೂ ಸಂಪರ್ಕವಿಲ್ಲ ವ್ಯವಹಾರ ಸೌಲಭ್ಯಗಳಿಗೆ ಬಳಸದೇ ಇರುವಂತಹ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ತಿಳಿಸಿದೆ.
ಈ ಸೇವೆಗಳನ್ನು ಉಪಯೋಗಿಸಿಕೊಳ್ಳಬೇಕಾದರೆ ಮಾ.16ರ ಮೊದಲು ಆನ್ಲೈನ್ ಹಾಗೂ ಸಂಪರ್ಕವಿಲ್ಲದ ವ್ಯವಹಾರಗಳಿಗೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳನ್ನು ಬಳಸಿಕೊಳ್ಳುವಂತೆ ಕಾರ್ಡ್ದಾರರಿಗೆ ಆರ್ಬಿಐ ತಿಳಿಸಿದೆ. ಅಲ್ಲದೇ, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ನ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದೂ ಆರ್ಬಿಐ ತಿಳಿಸಿದೆ.
ಆನ್ಲೈನ್, ಅಂತರಾಷ್ಟ್ರೀಯ, ಸಂಪರ್ಕವಿಲ್ಲದ ವಹಿವಾಟುಗಳಿಗೆ ಎಂದಿಗೂ ಬಳಸದ ಅಸ್ತಿತ್ವದಲ್ಲಿರುವ ಕಾರ್ಡ್ಗಳನ್ನು ಈ ಉದ್ದೇಶಕ್ಕಾಗಿ ಕಡ್ಡಾಯವಾಗಿ ನಿಷ್ಕ್ರಿಯಗೊಳಿಸಲಾಗುತ್ತದೆ. ಪಾವತಿ ಹಾಗೂ ವಸಾಹತು ವ್ಯವಸ್ಥೆಗಳ ಕಾಯ್ದೆ 2007ರ ಸೆಕ್ಷನ್ 10(2)ರ ಅಡಿಯಲ್ಲಿ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಆರ್ಬಿಐ ಅಧಿಸೂಚನೆ ತಿಳಿಸಿದೆ.
ಇದಲ್ಲದೇ, ಎಲ್ಲಾ ರೀತಿಯ ವ್ಯವಹಾರಗಳ ಸ್ಥಗಿತಗೊಳಿಸುವ, ಪ್ರಾರಂಭಿಸುವ ವ್ಯವಹಾರ ಮಿತಿಗಳನ್ನು ನಿಗದಿಪಡಿಸುವ ಸೌಲಭ್ಯಗಳನ್ನು ಕಾರ್ಡುದಾರರಿಗೆ ನೀಡುವಂತೆ ಆರ್ಬಿಐ ಕಾರ್ಡ್ ಒದಗಿಸುವವರಿಗೆ ಕೇಳಿದೆ.
ಈ ಸೌಲಭ್ಯವನ್ನು ದಿನದ 24 ಗಂಟೆಯೂ ಮೊಬೈಲ್ ಅಪ್ಲಿಕೇಶನ್, ಇಂಟರ್ನೆಟ್ ಬ್ಯಾಂಕಿಂಗ್, ಎಟಿಎಂ, ಐವಿಆರ್ನ ಮೂಲಕ ನೀಡಲಾಗುತ್ತದೆ. ಅಲ್ಲದೇ, ಶಾಖೆ ಅಥವಾ ಕಚೇರಿಗಳಲ್ಲಿ ನೀಡಬಹುದು ಎಂದು ಆರ್ಬಿಐ ಅಧಿಸೂಚನೆಯಲ್ಲಿ ತಿಳಿಸಿದೆ.
ಕಾರ್ಡ್ನಲ್ಲಿ ಏನಾದರು ಬದಲಾವಣೆಗಳಿದ್ದರೆ ಕಾರ್ಡುದಾರರಿಗೆ ಎಸ್ಎಂಎಸ್ ಅಥವಾ ಇಮೇಲ್ ಮೂಲಕ ಕಳುಹಿಸುವಂತೆ ಬ್ಯಾಂಕ್ಗೆ ಆರ್ಬಿಐ ತಿಳಿಸಿದೆ.