ಬೆಂಗಳೂರು, ಮಾ 8 (Daijiworld News/MSP): ನಗರದ ಡೈರಿ ಸರ್ಕಲ್ ಬಳಿಯಲ್ಲಿ ಸ್ಪೋಟಗೊಂಡ ಪರಿಣಾಮ ಚಿಂದಿ ಆಯುತ್ತಿದ್ದ ವ್ಯಕ್ತಿಯೊಬ್ಬರ ಕಾಲು ತುಂಡಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಆಡುಗೋಡಿ ಸಮೀಪದ ಡೈರಿ ಸರ್ಕಲ್ ಬಳಿಯಲ್ಲಿ ಚಿಂದಿ ಆಯುತ್ತಿದ್ದ ವೇಳೆಯಲ್ಲಿ ನಿಗೂಢ ಸ್ಪೋಟಕ ಸ್ಪೋಟಗೊಂಡ ಪರಿಣಾಮ, ಸ್ಥಳದಲ್ಲಿದ್ದ 50 ವರ್ಷದ ನರಸಿಂಹಪ್ಪ ಎನ್ನವವರ ಎಡಗಾಲು ಕಾಲು ತುಂಡಾಗಿದೆ. ಗಾಯಾಳು ನರಸಿಂಹಯ್ಯ ಎನ್ನುವವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿಸಿಪಿ ಶ್ರೀನಾಥ್ ಜೋಶಿ ಆಗಮಿಸಿದ್ದು, ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಕಸದ ರಾಶಿಯ ನಡುವೆ ಈ ಸ್ಫೋಟ ಸಂಭವಿಸಿರುವುದು ಅಚ್ಚರಿ, ಆತಂಕ ಮೂಡಿಸಿದೆ. ಸ್ಪೋಟಕ್ಕೆ ಕಾರಣ ಏನು ಎಂದು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಸಂಬಂಧ ಸ್ಥಳಕ್ಕೆ ಶ್ವಾನದಳ, ಬಾಂಬ್ ಸ್ಕ್ವಾಡ್ ಆಗಮಿಸಿದ್ದು, ಪರಿಶೀಲನೆಯಲ್ಲಿ ತೊಡಗಿದ್ದಾರೆ.