ನವದೆಹಲಿ, ಮಾ.08 (DaijiworldNews/PY) : ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ ಭಾರದ್ವಾಜ್(82) ಅವರು ಭಾನುವಾರ ನಿಧನರಾಗಿದ್ದಾರೆ.
ಬಹುದಿನಗಳಿಂದ ಆನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದಾರೆ. ದೆಹಲಿಯ ನಿಗಮ್ ಬೋದ್ ಘಾಟ್ನಲ್ಲಿ ಮಾ.9 ಸೋಮವಾರದಂದು ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಭಾರದ್ವಾಜ್ ಅವರ ಕುಟುಂಬ ವರ್ಗ ತಿಳಿಸಿದೆ.
2009ರಿಂದ 2014ರವರೆಗೆ ಕರ್ನಾಟಕದ ರಾಜ್ಯಪಾಲರಾಗಿದ್ದ ಅವರು ಕೇರಳದ ರಾಜ್ಯಪಾಲರಾಗಿಯೂ 1 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.