ಎರ್ನಾಕುಲಂ, ಮಾ. 09 (Daijiworld News/MB) : ಕೇರಳಕ್ಕೆ ಇಟಲಿಯಿಂದ ಮರಳಿದ್ದ ದಂಪತಿಯ 3 ವರ್ಷದ ಮಗುವಿಗೂ ಕೊರೊನಾ ಸೋಂಕು ತಗಲಿದ್ದು ಭಾರತದಲ್ಲಿ ಸೋಂಕಿತರ ಸಂಖ್ಯೆ 40ಕ್ಕೆ ಏರಿದೆ.
ಸೋಂಕಿತ ಮಗುವನ್ನು ಇಲ್ಲಿನ ವೈದ್ಯಕೀಯ ಕಾಲೇಜಿನ ವಿಶೇಷ ವಾರ್ಡ್ನಲ್ಲಿ ತೀವ್ರ ನಿಗಾದಲ್ಲಿ ಇರಿಸಲಾಗಿದೆ ಎಂದು ವರದಿ ತಿಳಿಸಿದೆ.
ಈ ನಡುವೆ ವಿದೇಶಗಳಿಂದ ಮರಳಿದವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರುವಂತೆ ಕೇರಳ ಸರ್ಕಾರ ಮನವಿ ಮಾಡಿದೆ.
ಕೊರೊನ ವೈರಸ್ ದೇಶದಲ್ಲಿ ಹರಡುತ್ತಲ್ಲೇ ಇದ್ದು ಕೇರಳದಲ್ಲಿ ಒಂದೇ ಕುಟುಂಬದ ಐವರಿಗೆ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿತ್ತು.