ನವದೆಹಲಿ, ಮಾ 9 (Daijiworld News/MSP): ಕೊರೊನಾ ಸೋಂಕು ಶಂಕಿತರಿಬ್ಬರು ಭಾರತದಲ್ಲಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. 33 ವರ್ಷದ ವ್ಯಕ್ತಿಯೋರ್ವ ಸೌದಿ ಅರೇಬಿಯಾದಿಂದ ಆಗಮಿಸಿದ್ದ ವ್ಯಕ್ತಿಯೋರ್ವ ಜ್ವರದಿಂದ ಸಾವನ್ನಪ್ಪಿದ್ದು, ಮತ್ತೊಬ್ಬರು ಇರಾನ್ ಪ್ರವಾಸ ಕೈಗೊಂಡು ವಾಪಸ್ಸಾದ 76 ವರ್ಷ ವಯಸ್ಸಿನ ಲಡಾಕ್ ನ ವ್ಯಕ್ತಿಯೊಬ್ಬರಲ್ಲಿ ಕೊರೋನ ವೈರಸ್ ಸೋಂಕು ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಶನಿವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ನಿವೃತ್ತ ಪೊಲೀಸ್ ಅಧಿಕಾರಿಯಾಗಿರುವ ಆ ವ್ಯಕ್ತಿ ನಿನ್ನೆ ಮೃತಪಟ್ಟಿದ್ದಾರೆ.
ಇವರಿಬ್ಬರಿಗೂ ಕೊರೋನ ವೈರಸ್ ಸೋಂಕು ಇತ್ತೇ ಎನ್ನುವುದನ್ನು ದೃಢಪಡಿಸಲು ಅಧಿಕಾರಿಗಳು ಅಂತಿಮ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದಾರೆ. 33 ವರ್ಷದ ಮಧುಮೇಹ ರೋಗಿಯಾಗಿದ್ದು, ಶೀತ ಮತ್ತು ಕಫದಿಂದ ಬಳಲುತ್ತಿದ್ದ. ಇದರಿಂದ ಭಯಪಟ್ಟ ಈತ ಭಾರತಕ್ಕೆ ಆಗಮಿಸಿದ್ದ. ಆದರೆ ಇಲ್ಲಿ ಬಂದ ಆತನಿಗೆ ಅನಾರೋಗ್ಯ ಹೆಚ್ಚಾಗಿತ್ತು ಎಂದು ಕುಟುಂಬಿಕರು ಹೇಳಿದ್ದಾರೆ.
ಭಾರತದಲ್ಲಿ ಇದುವರೆಗೆ ಒಟ್ಟು 40 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದೆ.