ಪುಣೆ, ಮಾ 9 (Daijiworld News/MSP): 2021 ಜ.1 ರಿಂದ ಸ್ಯಾನಿಟರಿ ಪ್ಯಾಡ್'ಗಳನ್ನು ತಯಾರು ಮಾಡುವ ಕಂಪನಿಗಳು ಅದರೊಂದಿಗೆ ಅದರ ವಿಲೇವಾರಿ ಬ್ಯಾಗ್ ಗಳನ್ನು ಒದಗಿಸುವುದು ಕಡ್ಡಾಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಅಂತರಾಷ್ಟ್ರೀಯ ಮಹಿಳಾ ದಿನದ ನಿಮಿತ್ತ ಪುಣೆಯಲ್ಲಿ ಆಯೋಜಿಸಿದ್ದ ’ಸ್ವಚ್ಚ ಸೇವಕ್ "ಕಾರ್ಯಕ್ರಮದಲ್ಲಿ ಮಾತನಾಡಿರುವ ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ ಅವರು, ಸ್ಯಾನಿಟರಿ ಪ್ಯಾಡ್'ಗಳನ್ನು ತಯಾರು ಮಾಡುವ ಕಂಪನಿಗಳಿಗೆ ಈಗಾಗಲೇ ವಿಲೇವಾರಿ ಬ್ಯಾಗ್ ಒದಗಿಸುವಂಯ್ತೆ ನಿರ್ದೇಶನ ನೀಡಲಾಗಿದೆ. ಪದೇ ಪದೆ ಮನವಿ ಮಾಡಿದ ಹೊರತಾಗಿಯೂ ಸ್ಯಾನಿಟರ್ ಪ್ಯಾಡ್ ತಯಾರಕರು ಪರಿಸರ ಸ್ನೇಹಿ ಬ್ಯಾಗ್ ಗಳನ್ನು ಒದಗಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪ್ಡಿಸಿದ್ದಾರೆ.
2021 ಜ.1 ರಿಂದ ಪರಿಸರ ಸ್ನೇಹಿ ಬ್ಯಾಗ್ ಗಳನ್ನು ಒದಗಿಸುವುದು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ನಗರ ಪ್ರದೇಶಗಳಲ್ಲಿ ಜಾರಿಯಲ್ಲಿರುವ ಸ್ವಚ್ಛತಾ ನಿಯಮಗಳನ್ನು ಹಳ್ಳಿಗಳಲ್ಲೂ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.