ಕೊಚ್ಚಿ, ಮಾ 9 (Daijiworld News/MSP): ಕೇರಳದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಗಂಭೀರವಾಗಿ ಪರಿಗಣಿಸಿರುವ ಕೇರಳ ಸರ್ಕಾರ ಕೊರೊನಾ ಪೀಡಿತ ದೇಶಗಳಿಗೆ ಹೋಗಿ ಬಂದಿರುವುದನ್ನು ಮುಚ್ಚಿಟ್ಟರೆ ಹಾಗೂ ರೋಗಲಕ್ಷಣ ಕಂಡುಬಂದರೂ ಅದನ್ನು ಹೇಳದೆ ಇದ್ದ ವ್ಯಕ್ತಿಗಳ ವಿರುದ್ದ ಜೈಲು ಶಿಕ್ಷೆ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ. ಮಾತ್ರವಲ್ಲದೆ ಕೇರಳದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಹೇಳಿದ್ದಾರೆ.
ವಿದೇಶ ಭೇಟಿ ಮಾಹಿತಿ ಮುಚ್ಚಿಡುವುದು ಅಪರಾಧವಾಗಿದ್ದು, ಅಂಥವರು ಶಿಕ್ಷೆಗೆ ಅರ್ಹರಾಗಿರುತ್ತಾರೆ ಎಂದಿದೆ. ಜೊತೆಗೆ ವಿದೇಶದಿಂದ ಆಗಮಿಸುವ ಎಲ್ಲರೂ ೨೮ ದಿನಗಳ ಕಾಲ ಮನೆಗೆಳಲ್ಲಿಯೇ ನಿಗಾ ವಹಿಸಬೇಕು ಎಂದು ಕೇರಳ ಸರ್ಕಾರ ಸೂಚಿಸಿದೆ.
ಇಟಲಿಗೆ ಭೇಟಿ ನೀಡಿ ವಾಪಾಸದ ಐವರ ಪೈಕಿ ಮೂವರು ಏರ್ ಪೋರ್ಟ್ ನಲ್ಲಿ ಸ್ಕ್ರೀನಿಂಗ್ ನಿಂದ ತಪ್ಪಿಸಿಕೊಂಡಿದ್ದರು ಎನ್ನಲಾಗಿದೆ. ಉಳಿದವರಿಬ್ಬರು ಇವರ ಸಂಬಂಧಿಗಳಾಗಿದ್ದಾರೆ. ಸಧ್ಯಕ್ಕೆ ಇವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಸಚಿವೆ ತಿಳಿಸಿದ್ದಾರೆ.