ನವದೆಹಲಿ, ಮಾ. 09 (Daijiworld News/MB) : ಕೇರಳದ ಮೂರು ವರ್ಷದ ಮಗುವಿನಲ್ಲಿ ಕೊರೊನಾ ವೈರಸ್ ಪತ್ತೆಯಾದ ಬಳಿಕ ನವದೆಹಲಿ, ಜಮ್ಮು ಕಾಶ್ಮೀರ ಹಾಗೂ ಉತ್ತರ ಪ್ರದೇಶದಲ್ಲಿಯೂ ಪತ್ತೆಯಾಗಿದ್ದು ಈ ಭಾರತದಲ್ಲಿ ಸೋಂಕಿತರ ಸಂಖ್ಯೆ 43 ಕ್ಕೆ ಏರಿದೆ.
ಈ ಕುರಿತಾಗಿ ಹೇಳಿಕೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಸಂಜೀವ ಕುಮಾರ್, "ದೆಹಲಿಯಲ್ಲಿ ಪತ್ತೆಯಾದ ವ್ಯಕ್ತಿಯು ಇಟಲಿಗೆ ಹೋಗಿ ಬಂದಿದ್ದ ಎಂದು ತಿಳಿದು ಬಂದಿದೆ. ಜಮ್ಮು ಕಾಶ್ಮೀರದಲ್ಲಿ 63 ವರ್ಷದ ವೃದ್ಧೆಗೆ ಸೋಂಕು ತಗಲಿದೆ.ಜಮ್ಮು ಕಾಶ್ಮೀರದಲ್ಲಿ ಮೊದಲ ಪ್ರಕರಣ ಇದಾಗಿದೆ. ಉತ್ತರ ಪ್ರದೇಶದ ಓರ್ವ ವ್ಯಕ್ತಿಗೂ ಸೋಂಕು ತಗಲಿದೆ" ಎಂದು ತಿಳಿಸಿದ್ದಾರೆ.
ಒಟ್ಟು 43 ಮಂದಿಗೆ ಸೋಂಕು ತಗಲಿದ್ದು ಈವರೆಗೆ ಸೋಂಕಿನಿಂದಾಗಿ ಯಾರು ಕೂಡಾ ಮೃತಪಟ್ಟಿಲ್ಲ ಎಂದು ತಿಳಿಸಿದ್ದಾರೆ.