ನವದೆಹಲಿ, ಮಾ.09 (DaijiworldNews/PY) : "ಸಶಸ್ತ್ರ ಪಡೆ ಸೇರುವ ಮಹಿಳೆಯರ ಸಂಖ್ಯೆಯು ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಳ ಕಂಡುಬಂದಿದ್ದು, ಅವರನ್ನು ಪಡೆಗಳ ಸೇರ್ಪಡೆಯಿಂದ ದೂರ ಇರಿಸುವ ಪ್ರಶ್ನೆಯೇ ಇಲ್ಲ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ನೀತಿ ಆಯೋಗ ಆಯೋಜಿಸಿದ್ದ ವುಮನ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಗಣರಾಜ್ಯೋತ್ಸವ ದಿನದಂದು ನಡೆದ ಪರೇಡ್ನಲ್ಲಿ ಪುರುಷರ ಪಡೆಯನ್ನು ಮುನ್ನಡೆಸಿದ ರಾನಿಯಾ ಶೇರ್ಗಿಲ್ ಅವರನ್ನು ಉದಾಹರಣೆ ನೀಡಿ, ಮಹಿಳೆಯರಿಗೆ ಹಿಂದೆ ಅವಕಾಶವೇ ಇಲ್ಲದಂತಿದ್ದ ಹಲವಾರು ಕ್ಷೇತ್ರಗಳಲ್ಲಿ ಇಂದು ಮಹಿಳೆಯರು ನೇತೃತ್ವವನ್ನು ವಹಿಸಿದ್ಧಾರೆ. ಹೀಗಿರುವಾಗ ಅವರನ್ನು ಸಶಸ್ತ್ರ ಪಡೆಗಳಿಂದ ಹೊರಗಿಡುವುದಕ್ಕೆ ಅರ್ಥವಿಲ್ಲ" ಎಂದು ತಿಳಿಸಿದರು.