ನವದೆಹಲಿ, ಮಾ. 09 (Daijiworld News/MB) : ಅಕ್ರಮ ಹಣ ವರ್ಗಾವಣೆ ಆರೋಪಿ ಯೆಸ್ ಬ್ಯಾಂಕ್ನ ಸ್ಥಾಪಕ ರಾಣ ಕಪೂರ್ ಅವರ ನಿವಾಸ ಹಾಗೂ ಇತರ ಅಧಿಕಾರಿಗಳಿಗೆ ಸೇರಿದ ಸಂಸ್ಥೆಗಳ ಮೇಲೆ ಸೋಮವಾರ ಸಿಬಿಐ ದಾಳಿ ನಡೆಸಿದೆ.
ರಾಣಾ ಕಪೂರ್ ಗೆ ಸೇರಿರುವ ಡಿಎಚ್ ಎಫ್ ಎಲ್ , ಆರ್ ಕೆ ಡಬ್ಲ್ಯ ಡೆವಲಪರ್ಸ್ ಮತ್ತು ಡೊಯಿಟ್ ಅರ್ಬನ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್, ಡಿಹೆಚ್ಎಫ್ಎಲ್ ಬಾಂದ್ರಾ ಕಚೇರಿ ಸೇರಿದಂತೆ ಏಳು ಸ್ಥಳಗಳಿಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳಿಗಾಗಿ ಶೋಧ ನಡೆಸಿದ್ದಾರೆ.
ರಾಣಾ ಕಪೂರ್, ಡಿಎಚ್ಎಫ್ಎಲ್ ಪ್ರವರ್ತಕ ಕಪಿಲ್ ವಾಧ್ವಾನ್ ವಿರುದ್ಧ ಐಪಿಸಿ ಸೆಕ್ಸನ್ 120(ಬಿ), 420 , ಭ್ರಷ್ಟಾಚಾರ ಕಾಯ್ದೆ 7,12, ಮತ್ತು 13 ಕಾಯ್ದೆ ಅನ್ವಯ ಎಫ್ ಐಆರ್ ದಾಖಲಾಗಿದೆ.
ಯೆಸ್ ಬ್ಯಾಂಕ್ ಆರ್ಥಿಕವಾಗಿ ಬಿಕ್ಕಟ್ಟಿನಲ್ಲಿದ್ದು ಆರ್ಬಿಐ ಯೆಸ್ ಬ್ಯಾಂಕ್ನ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅಕ್ರಮ ಹಣ ವರ್ಗಾವಣೆ ಆರೋಪಿ ಯೆಸ್ ಬ್ಯಾಂಕ್ನ ಸ್ಥಾಪಕ ರಾಣ ಕಪೂರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದು ನ್ಯಾಯಾಲಯ ಅವರನ್ನು ಇಡಿ ಅಧಿಕಾರಿಗಳ ಕಸ್ಟಡಿಗೆ ನೀಡಿದೆ.