ನವದೆಹಲಿ, ಮಾ. 09 (Daijiworld News/MB) : ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರು ಪತ್ನಿ ಮತ್ತು ಪುತ್ರಿಯರ ವಿರುದ್ಧವೂ ಕೂಡಾ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ರಾಣಾ ಅವರ ಪುತ್ರಿ ರೋಶ್ನಿ ಕಪೂರ್ ಅವರು ತನಿಖೆ ನಡೆಯುತ್ತಿರುವ ನಡುವೆಯೇ ಭಾನುವಾರ ಲಂಡನ್ಗೆ ತೆರಳಲು ಸಿದ್ಧವಾಗಿದ್ದು ಆ ಕೂಡಲೇ ಆಕೆಯನ್ನು ತಡೆಹಿಡಿಯಲಾಗಿದೆ.
ಯೆಸ್ ಬ್ಯಾಂಕ್ ಡಿಎಚ್ಎಫ್ಎಲ್ನಿಂದ 3,700 ಕೋಟಿ ರೂಪಾಯಿ ಮೊತ್ತದ ಡಿಬೆಂಚರ್ಗಳನ್ನು ಖರೀದಿ ಮಾಡಿತ್ತು. 'ಡೂಇಟ್' ಎಂಬ ಕಂಪನಿಗೆ 600 ಕೋಟಿ ರೂಪಾಯಿ ಸಾಲ ನೀಡಿತ್ತು. ಈ ಕಂಪನಿ ಕಪೂರ್ ಪುತ್ರಿಯರಾದ ರೋಶ್ನಿ ಕಪೂರ್, ರಾಖಿ ಕಪೂರ್ ಟಂಡನ್ ಮತ್ತು ರಾಧಾ ಕಪೂರ್ಗೆ ಸೇರಿದ್ದಾಗಿದೆ. ಈ ಮೂಲಕ ಒಟ್ಟು ಭ್ರಷ್ಟಾಚಾರದ ಮೊತ್ತ 4,300 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂಬುದಾಗಿ ತನಿಖಾ ಸಂಸ್ಥೆ ಹೇಳಿದೆ.
ಆದರೆ ಈ ಆರೋಪವನ್ನು ರಾಣಾ ಕಪೂರ್ ನಿರಾಕರಿಸಿದ್ದಾರೆ. ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ತನ್ನ ಕಕ್ಷಿದಾರರನ್ನು 'ಹರಕೆಯ ಕುರಿ' ಮಾಡಲಾಗುತ್ತಿದ್ದೆ ಎಂಬುದಾಗಿ ಕಪೂರ್ ವಕೀಲ ಝೈನ್ ಶ್ರಾಫ್ ವಾದಿಸಿದ್ದಾರೆ.