ಮಾ 09(DaijiworldNews/SM): ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೋನಾ ಮಹಾಮಾರಿ ವೈರಸ್ ಕರ್ನಾಟಕಕ್ಕೂ ಎಂಟ್ರಿಯಾಗಿದ್ದು, ಓರ್ವ ವ್ಯಕ್ತಿಯಲ್ಲಿ ವೈರಸ್ ಇರುವುದು ಖಚಿತವಾಗಿದೆ. ಈ ಕುರಿತಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ವೈರಸ್ ಬೆಂಗಳೂರಿನ ಓರ್ವ ವ್ಯಕ್ತಿಯಲ್ಲಿ ಇರುವುದು ಖಚಿತ ಎನ್ನಲಾಗಿದೆ. ಈ ವ್ಯಕ್ತಿ ಮಾ.01 ರಂದು ಅಮೆರಿಕದಿಂದ ಬೆಂಗಳೂರಿಗೆ ಬಂದಿದ್ದರು. ಸುಮಾರು 40ರ ಹರೆಯದ ಇವರು ಇಂಜಿನಿಯರ್ ವೃತ್ತಿಯಲ್ಲಿದ್ದರು. ಇದೀಗ ಇವರಿಗೆ ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಇವರೊಂದಿಗೆ ಆಗಮಿಸಿದ ಇತರರ ಬಗ್ಗೆ ಮಾಹಿತಿ ಪಡೆಯಲಾಗುತ್ತಿದ್ದು, ಅವರನ್ನು ಕೂಡ ತಪಾಸಣೆಗೆ ಒಳಪಡಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ಕೊರೋನಾ ಪೀಡಿತ ವ್ಯಕ್ತಿಯ ಪತ್ನಿ, ಮಗು ಹಾಗೂ ಚಾಲಕನನ್ನೂ ಸಹ ಪ್ರತ್ಯೇಕವಾಗಿ ಇರಿಸಲಾಗಿದ್ದು, ಸೋಂಕು ಪತ್ತೆಯಾದ ವ್ಯಕ್ತಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ.