ನವದೆಹಲಿ, ಮಾ 10 (Daijiworld News/MSP): ಮಧ್ಯಪ್ರದೇಶದ ಪ್ರಭಾವಿ ಯುವ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಂಗಳವಾರ ಪಕ್ಷಕ್ಕೆ ರಾಜೀನಾಮೆ ನೀಡಿ, " ಇನ್ನು ಮುಂದುವರಿಯುವ ಸಮಯ" ಎಂದು ಹೇಳಿದ್ದಾರೆ. ಕಳೆದ 18 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯರಾಗಿದ್ದ ನನಗೆ ಇನ್ನು ಮುಂದುವರಿಯುವ ಸಮಯ ಬಂದಿದೆ. ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ.
"ಕಳೆದ 18 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯನಾಗಿದ್ದೆ. ನನಗೆ ಈಗ ಸಮಯ ಬಂದಿದೆ ಹೀಗಾಗಿ ಮುಂದುವರಿಯಬೇಕಾಗಿದೆ. ಎಂದು ಸಿಂಧಿಯಾ ತಮ್ಮ ರಾಜೀನಾಮೆ ಪತ್ರದಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಸೋನಿಯಾ ಅವರಿಗೆ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಮೊದಲಿನಿಂದಲೂ ನನ್ನ ಗುರಿಯಾಗಿದ್ದದ್ದು ರಾಜ್ಯ ಮತ್ತು ದೇಶದ ಜನರಿಗೆ ಸೇವೆ ಸಲ್ಲಿಸುವುದಾಗಿದೆ. ಕಾಂಗ್ರೆಸ್ ಪಕ್ಷದೊಳಗಿದ್ದು ಇದನ್ನು ಮಾಡಲು ನನಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೊಸ ಪ್ರಾರಂಭವನ್ನು ಎದುರಿಸವ ಸಮಯ ಬಂದಿದೆ. ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ನನಗೆ ವೇದಿಕೆ ಒದಗಿಸಿದ್ದಕ್ಕಾಗಿ ನನ್ನ ಪಕ್ಷದ ಎಲ್ಲ ಸಹೋದ್ಯೋಗಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.