ಬೆಂಗಳೂರು, ಮಾ 10 (Daijiworld News/MSP): ವಿಧಾನಸಭೆ ಅಧಿವೇಶನದಲ್ಲಿ ಸೋಮವಾರ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಂವಿಧಾನಕ್ಕೆ 2019ರ ಜೂನ್ ವರೆಗೆ 104ತಿದ್ದುಪಡಿಗೊಳಿಸಲಾಗಿದೆ. ಅದರಲ್ಲಿ 18 ತಿಂಗಳ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 48 ತಿದ್ದುಪಡಿಗಳು ಹಾಗೂ 12 ಹೊಸ ಪರಿಚ್ಛೇದಗಳ ಸೇರ್ಪಡೆಯಾಯಿತು.ಈ ಸಂದರ್ಭದಲ್ಲಿ ಯಾವುದೇ ರೀತಿಯ ಚರ್ಚೆಗಳಿಲ್ಲದೆ ಸಂವಿಧಾನದ ಪೀಠಿಕೆಯಲ್ಲಿ ಜಾತ್ಯಾತೀತತೆ ಎನ್ನುವ ಶಬ್ಧವನ್ನು ಸೇರಿಸಲಾಯಿತು. ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರವು ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾಗಿ ತರಾತುರಿಯಾಗಿ ಜಾತ್ಯಾತೀತತೆ ಎನ್ನುವ ಶಬ್ಧವನ್ನು ಪೀಠಿಕೆಗೆ ಸೇರಿಸುವ ಮೂಲಕ ಅಂಬೇಡ್ಕರ್ ಅವರಿಗೆ ಮತ್ತು ಸಂವಿಧಾನದ ಆಶಯಕ್ಕೆ ದ್ರೋಹ ಬಗೆದರು.
ಮತ್ತೊಂದೆಡೆ ಪರಿಚ್ಛೇದ 48ರಲ್ಲಿ ಉಲ್ಲೇಖಿಸಿದ ಗೋಹತ್ಯೆ ನೀಷೇಧವನ್ನು ಈ ದೇಶದಲ್ಲಿನ ಸರಕಾರ ಕಾನೂನು ಮಾಡುವ ಆಶಯವನ್ನು ಅಂಬೇಡ್ಕರ್ ತಿಳಿಸಿದ್ದರೂ 70 ಆಡಳಿತ ಮಾಡಿದ ಕಾಂಗ್ರೆಸ್ ಓಟ್ ಬ್ಯಾಂಕ್ ಕಾರಣಕ್ಕಾಗಿ ಗೋಹತ್ಯೆ ನಿಷೇಧವನ್ನು ಜಾರಿಗೆ ತರದೆ ಮತ್ತೊಂದು ದ್ರೋಹವೆಸಗಿದರು ಎಂದರು
ಹಿರಿಯ ಸದಸ್ಯರಾದ ರಮೇಶ್ ಕುಮಾರ್ ಅವರ ಆರ್.ಎಸ್.ಎಸ್. ಹೇಳಿಕೆಗೆ ಉತ್ತರಿಸಿ ಅಂಬೇಡ್ಕರ್ 1939ರ ಮಾರ್ಚ್ನಲ್ಲಿ ಪೂಣೆಯ ಆರ್.ಎಸ್.ಎಸ್. ಶಾಖೆಗೆ ಭೇಟಿದ ಸಂದರ್ಭದಲ್ಲಿ ಮಾತನಾಡಿದ ಅಂಬೇಡ್ಕರ್ ಅವರು, ಸವರ್ಣಿಯರು ಮತ್ತು ದಲಿತರ ಮಧ್ಯೆ ಯಾವುದೇ ತಾರತಮ್ಯ ಇಲ್ಲದೆ ಇರುವುದನ್ನು ನೋಡಿ ಖುಷಿ ತಂದಿದೆ ಎಂದಿದ್ದರು ಎಂದರು.
ತುರ್ತು ಪರಿಸ್ಥಿತಿ ಸಂದರ್ಭ ಕ್ಯಾ. ದೀನ್ ಶಂಕರ್ ಅನೇಕ ಪ್ರಚಾರಕರು ಅನೇಕ ಕಾರ್ಯಕರ್ತರು ಸಂವಿಧಾನದ ರಕ್ಷಣೆಗಾಗಿ ಜೈಲು ವಾಸ ಹೋರಾಟ ನಡೆಸಿರುವುದೂ ನಿರಂತರವಾಗಿ ಇವತ್ತಿನ ವರೆಗೂ ಸಂವಿಧಾನ ಅಂಬೇಡ್ಕರ್ ಆಶಯದ ಇರುವುದರಿಂದಲೆ ವಾಜಪೇಯಿ, ಮೋದಿ ಅವರನ್ನು ಜನತೆ ಸಂವಿಧಾನದ ರಕ್ಷರನ್ನಾಗಿ ಬೆಳೆಸಿ ಅಧಿಕಾರವನ್ನು ನೀಡಿದೆ.
ಅಂಜಲಿ ನಿಂಬಾಳ್ಕರ್ ಅವರ ಮಹಿಳಾ ಸಮಾನತೆಯನ್ನು ಉಲ್ಲೇಖಿಸಿ, ಪೂಂಜ ಅವರು ಮಾತನಾಡಿ, ದೇಶದಲ್ಲಿನ ಒಂದು ಸಮುದಾಯ ಮಹಿಳೆಯ ಮುಖವನ್ನು ಮುಚ್ಚಿಸಿ ಕತ್ತಲೆಯಲ್ಲಿಟ್ಟು ಬುರ್ಖ ಧರಿಸಿ ಶೋಷಿಲಾಗುತ್ತಿದೆ. ಅವರಿಗೂ ಸ್ವಾತಂತ್ರ್ಯ ಸಮಾನತೆ ನೀಡಲು ಕಾಂಗ್ರೆಸ್ನವರು ಮುಂದಾಗಬೇಕು. ಈ ಮೂಲಕ ಅಂಬೇಡ್ಕರ್ ಆಶಯವನ್ನು ಉಳಿಸಬಹುದೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಧಿವೇಶನದಲ್ಲಿ ಭಾಗವಹಿಸಿ ಚರ್ಚೆಯಲ್ಲಿ ತಿಳಿಸಿದರು.