ಕಾಸರಗೋಡು, ಮಾ 10 (DaijiworldNews/SM): ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕೇರಳದಲ್ಲಿ ಮಾರ್ಚ್ 11ರ ಬುಧವಾರದಿಂದ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಂಗನವಾಡಿಯಿಂದ ಏಳನೇ ತರಗತಿ ತನಕ ಶಾಲೆಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಲಾಗಿದೆ.
ಒಂದರಿಂದ ಏಳರ ತನಕದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಿದ್ಯಾರ್ಥಿಗಳಿಗೆ ನಿಗದಿಯಂತೆ ಪರೀಕ್ಷೆಗಳು ನಡೆಯಲಿವೆ. 8, 9ನೇ ಹಾಗೂ ಹತ್ತನೇ ತರಗತಿ ಅಲ್ಲದೆ ಹಯರ್ ಸೆಕಂಡರಿ ಪರೀಕ್ಷೆಗಳು ನಿಗಧಿಯಂತೆ ನಡೆಯಲಿವೆ. ರಜೆಯು ಅಂಗನವಾಡಿ, ಮದ್ರಸ ಹಾಗೂ ಸಿಬಿಎಸ್ಇ ಶಾಲೆಗಳಿಗೂ ಅನ್ವಯವಾಗಲಿದೆ. ಒಂದರಿಂದ ಏಳನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಇನ್ನು ಸರಕಾರಿ ಕಾರ್ಯಕ್ರಮ, ಸಭೆ ಸಮಾರಂಭಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೆ, ಸ್ಪೆಷಲ್ ಕ್ಲಾಸ್, ಟ್ಯೂಷನ್ ಗೂ ಅನ್ವಯವಾಗಲಿದೆ. ಸಿನಿಮಾ ಪ್ರದರ್ಶನ ಮಾರ್ಚ್ 31ರ ತನಕ ರದ್ದುಗೊಳಿಸಿ ಕೇರಳ ಸರಕಾರ ಆದೇಶ ಹೊರಡಿಸಿದೆ.