ಮಧ್ಯಪ್ರದೇಶ, ಮಾ. 11 (Daijiworld News/MB) : ನನ್ನ ತಂದೆಯ ನಿಲುವಿನ ಬಗ್ಗೆ ನನಗೆ ಹೆಮ್ಮಯಿದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಪುತ್ರ ಮಹಾನಾರ್ಯಮನ್ ಸಿಂಧಿಯಾ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನನ್ನ ತಂದೆಯ ನಿಲುವಿನ ಬಗ್ಗೆ ನನಗೆ ಹೆಮ್ಮಯಿದೆ. ಪರಂಪರೆಗೆ ರಾಜೀನಾಮೆ ನೀಡುವುದು ಒಂದು ದೈರ್ಯದ ವಿಚಾರ. ಇತಿಹಾಸ ಈ ಕುರಿತಾಗಿ ಮಾತನಾಡಬಹುದು, ನನ್ನ ಕುಟುಂಬಕ್ಕೆ ಎಂದಿಗೂ ಅಧಿಕಾರದ ಹಸಿವು ಇರಲಿಲ್ಲ ಎಂದು ನಾನು ಹೇಳಿದಾಗ ಇತಿಹಾಸವು ತಾನೇ ಮಾತನಾಡಬಲ್ಲದು. ನಾವು ನೀಡಿದ ಭರವಸೆಯಂತೆ ನಾವು ಎಲ್ಲೇ ಇದ್ದರೂ ಭಾರತ ಮತ್ತು ಮಧ್ಯಪ್ರದೇಶದಲ್ಲಿ ಪರಿಣಾಮಕಾರಿ ಬದಲಾವಣೆಯನ್ನು ಮಾಡುತ್ತೇವೆ" ಎಂದು ಹೇಳಿದ್ದಾರೆ.
ಈ ಮೊದಲು ಮಂಗಳವಾರ ರಾಜೀನಾಮೆ ನೀಡಿದ ಪತ್ರವನ್ನು ತನ್ನ ತಂದೆ ಟ್ವೀಟ್ ಮಾಡಿದ್ದನ್ನು ರೀ ಟ್ವೀಟ್ ಮಾಡಿದ್ದ ಅವರು, "ಈ ಸ್ಥಿತಿಗೆ ತಲುಪಿದಕ್ಕೆ ದುಖಃವಿದೆ" ಎಂದು ಹೇಳಿದ್ದರು.
ಸಿಂಧಿಯಾ ಅವರ ಪುತ್ರ ಈ ಮೊದಲು ತನ್ನ ತಂದೆಯಂತೆ ಮೋದಿ ಸರ್ಕಾರದ ವಿರುದ್ಧ ಚಾಟಿ ಬೀಸುತ್ತಿದ್ದರು.
ಮಧ್ಯಪ್ರದೇಶ ಕಾಂಗ್ರೆಸ್ ನಾಯಕ ಸಿಂಧಿಯಾ ಅವರು ಕಾಂಗ್ರೆಸ್ ಪಕ್ಷ ತೊರೆದಿದ್ದು ಈಗ ಹೊಸ ಆರಂಭ ಎಂದು ಹೇಳಿದ್ದಾರೆ. ತಾನು ರಾಜೀನಾಮೆ ಪತ್ರ ಸಲ್ಲಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಬೇಟಿಯಾಗಿದ್ದು ಸಿಂಧಿಯಾ ಅವರ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿದೆ.
ಸಿಂಧಿಯಾ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಅವರ ಈ ನಡೆಯನ್ನು ಸಮರ್ಥಿಸಿದ್ದಾರೆ.