ಭೋಪಾಲ್, ಮಾ.11 (DaijiworldNews/PY) : ಕಾಂಗ್ರೆಸ್ನೊಂದಿಗಿನ ದೀರ್ಘಕಾಲದ ನಂಟು ಕಳಚಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ 22 ಶಾಸಕರು ಸಹ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಜೆಪಿಯನ್ನು ದೂರಿದೆ.
ಬಿಜೆಪಿಯ ಒಡೆದು ಆಳುವ ನೀತಿಯ ಸಫಲವಾಗುವುದಿಲ್ಲ. ಕಾಂಗ್ರೆಸ್ ಪಕ್ಷವು ಒಗ್ಗಟ್ಟಾಗಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಘಟಕ ತಿಳಿಸಿದೆ.
ಕಾಂಗ್ರೆಸ್ ಪಕ್ಷವು ಒಟ್ಟಾರೆ ಒಗ್ಗಟ್ಟಾಗಿದೆ. ಕಾಂಗ್ರೆಸ್ ಸರ್ಕಾರ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರ ನಾಯಕತ್ವದ ಅಡಿಯಲ್ಲಿ ಸಂಪೂರ್ಣ ಭದ್ರ ಹಾಗೂ ಒಗ್ಗಟ್ಟಾಗಿದೆ. ಎಂದಿಗೂ ಬಿಜೆಪಿಯ ಒಡೆದು ಆಳುವ ನೀತಿ ಯಶಸ್ವಿಯಾಗುವುದಿಲ್ಲ. ರಾಜ್ಯದ ಜನರ ಹೊಣೆಗಾರಿಕೆ, ಕರ್ತವ್ಯ ಹಾಗೂ ನೈತಿಕತೆಗೆ ನಮ್ಮ ಎಲ್ಲಾ ಶಾಸಕರು ಕೂಡಾ ಬದ್ದರಾಗಿದ್ದಾರೆ ಎಂಬುದಾಗಿ ಟ್ವೀಟ್ ಮಾಡಿದೆ.
ಮುಖಂಡರಾದ ಸಜ್ಜನ್ ಸಿಂಗ್ ವರ್ಮಾ ಹಾಗೂ ಗೋವಿಂದ್ ಸಿಂಗ್ ಅವರನ್ನು ಹೋಟೆಲ್ನಲ್ಲಿ ತಂಗಿದ್ದ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆಲವು ರೆಬೆಲ್ ಶಾಸಕರನ್ನು ಸಮಾಧಾನಪಡಿಸಿ ಕರೆತರುವಂತೆ ಕಾಂಗ್ರೆಸ್ ಬೆಂಗಳೂರಿಗೆ ಮಂಗಳವಾರ ಕಳುಹಿಸಿತ್ತು.
ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಬಹುತೇಕ ರೆಬಲ್ ಶಾಸಕರು ಆಪ್ತರು ಹಾಗೂ ಪಕ್ಷದೊಳಗೆ ಸಿಂಧಿಯಾ ಅವರನ್ನು ಕಡೆಗಣಿಸಿದ್ದಕ್ಕೆ ಬೇಸರಗೊಂಡಿದ್ದರು. ಮಧ್ಯಪ್ರದೇಶದಲ್ಲಿ 2018ರಲ್ಲಿ ಸರ್ಕಾರ ರಚನೆಯಾದಾಗಿನಿಂದಲೂ ಒಳಗೊಳಗೆ ಭಿನ್ನಾಭಿಪ್ರಾಯ ತಲೆದೋರಲು ಕಾಂಗ್ರೆಸ್ ಸಾಕ್ಷಿಯಾಗಿತ್ತು.