ಕಲಬುರ್ಗಿ, ಮಾ.11 (DaijiworldNews/PY) : ಹೈದರಾಬಾದ್ನಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಗರದ ಎಂಎಸ್ಕೆ ಮಿಲ್ ಬಡಾವಣೆಯ ನಿವಾಸಿಯಾಗಿದ್ದ 76 ವರ್ಷದ ವೃದ್ಧ ಮಂಗಳವಾರ ತಡರಾತ್ರಿ ಸಾವನ್ನಪ್ಪಿದ್ಧಾರೆ.
ಇತ್ತೀಚೆಗೆ ಸೌದಿ ಅರೇಬಿಯಾದಿಂದ ಬಂದಿದ್ದ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಅವರನ್ನು ತಕ್ಷಣ ಕಲಬುರ್ಗಿಯ ಜಿಮ್ಸ್ನ ವಿಶೇಷ ವಾರ್ಡ್ಗೆ ಸ್ಥಳಾಂತರಿಸಲಾಗಿತ್ತು. ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ಕುಟುಂಬದವರು ಒತ್ತಾಯಪೂರ್ವಕವಾಗಿ ವೈದ್ಯಕೀಯ ಸಲಹೆ ಮೀರಿ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಸಾವನ್ನಪ್ಪಿದ್ಧಾರೆ ಎಂದು ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಜಿಲ್ಲೆಯ ಜಾಗೃತಿ ವಹಿಸಲು ಆರೋಗ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಅಲ್ಲದೇ ಕೊರೊನಾ ಶಂಕಿತ ವ್ಯಕ್ತಿಯ ಅಂತ್ಯಕ್ರಿಯೆ ನಡೆಯುವವರೆಗೂ ಉಸ್ತುವಾರಿ ವಹಿಸಿಕೊಳ್ಳಲು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಶರಣಬಸಪ್ಪ ಅವರನ್ನು ಉಸ್ತುವಾರಿಯನ್ನಾಗಿ ಜಿಲ್ಲಾ ಆರೋಗ್ಯಾಧಿಕಾರಿ ಎಂ.ಎ.ಜಬ್ಬಾರ್ ನೇಮಿಸಿದ್ದಾರೆ.
ಮೃತರ ಸಾವಿಗೆ ಕೊರೊನಾ ಕಾರಣ ಎಂಬ ವಿಷಯ ಸ್ಪಷ್ಟವಾಗಿಲ್ಲ. ಕಫ ಪರೀಕ್ಷೆ ವರದಿ ಇನ್ನೂ ಸಿಗಬೇಕಿದೆ. ಮಾಧ್ಯಮಗಳಲ್ಲಿ ವ್ಯಕ್ತಿ ಸಾವಿಗೆ ಕೊರೊನಾ ಕಾರಣ ಎಂಬ ವರದಿಗಳು ಪ್ರಸಾರವಾಗುತ್ತಿರುವುದನ್ನು ಗಮನಿಸಿ ಈ ಸ್ಪಷ್ಟನೆ ನೀಡುತ್ತಿದ್ಧೇನೆ. ಜನರಲ್ಲಿ ಮಾಧ್ಯಮಗಳು ಆತಂಕ ಹುಟ್ಟಿಸಬಾರದು. ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರಕ್ಕೆ ಸಹಕರಿಸಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತ ಪಂಕಜ್ಕುಮಾರ್ ಪಾಂಡೆ ತಿಳಿಸಿದ್ಧಾರೆ.