ನವದೆಹಲಿ, ಮಾ. 11 (Daijiworld News/MB) : ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ಬಳಿಕ ಶಶಿ ತರೂರ್ ಸೇರಿದಂತೆ ಇತರೆ ನಾಯಕರು ರಾಜೀನಾಮೆ ನೀಡಲಿದ್ದಾರೆ ಎನ್ನುವ ಊಹಾಪೋಹ ವಿಚಾರಗಳು ಕೇಳಿಬರುತ್ತಿದ್ದು ಈ ಬಗ್ಗೆ ಸ್ಫಷ್ಟನೆ ಶಶಿ ತರೂರ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನಾನು ಬಿಜೆಪಿ ಸೇರುವುದಾಗಿ ಹರಡುತ್ತಿರುವ ಊಹಾಪೋಹವನ್ನು ಕೇಳಿ ಸಂತೋಷಪಡಬೇಕಿಲ್ಲ. ನಾನು ರಾಜಕೀಯವನ್ನು ವೃತ್ತಿಯನ್ನಾಗಿಸಿ ಈ ಕ್ಷೇತ್ರಕ್ಕೆ ಬಂದಿಲ್ಲ. ಆದರೆ ನಾಲ್ಕು ದಶಕಗಳಿಂದಲೂ ನನ್ನ ತತ್ವಗಳನ್ನು ನಿರೂಪಿಸಿಕೊಂಡೇ ಬಂದಿದ್ದೇನೆ. ಬೇಕಿದ್ದಲ್ಲಿ ಕಾಗದ ಪತ್ರಗಳನ್ನು ನೋಡಿ! ನನ್ನ ದಾಖಲೆಗಳೇ ಅದನ್ನು ಹೇಳುತ್ತದೆ. ನಾನು ಎಂದಿಗೂ ಅವಕಾಶವಾದಿಯಾಗಿರಲಿಲ್ಲ ಮತ್ತು ಮುಂದೆ ಆಗುವುದು ಇಲ್ಲ" ಎಂದು ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಘಟಿಸಿದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಮಾರ್ಚ್ 10ರಂದು ಜ್ಯೋತಿರಾದಿತ್ಯ ಸಿಂಧಿಯಾ ರಾಜೀನಾಮೆ ನೀಡಿದ್ದು ಆ ಬಳಿಕ 22 ಶಾಸಕರು ರಾಜೀನಾಮೆ ನೀಡಿದ್ದರು. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಅವರು ಸಲ್ಲಿಸಿದ್ದ ರಾಜೀನಾಮೆ ಪತ್ರದಲ್ಲಿ ನಾನು ಈಗ ಮುನ್ನಡೆಯುವ ಸಮಯ ಎಂದಿದ್ದರು.