ಬೆಂಗಳೂರು, ಮಾ.11 (DaijiworldNews/PY) : ಮಾಜಿ ಸ್ಪೀಕರ್ ರಮೇಶ್ ಕುಮಾರ್ ಓರ್ವ ದೊಡ್ಡ ಭ್ರಷ್ಟ ಮಾತ್ರವಲ್ಲ, ಕೊಲೆಗಡುಕನೂ ಹೌದು. ಆತ ಎಷ್ಟು ಕೊಲೆ ಮಾಡಿದ್ದಾರೆ ಎಂಬ ಬಗ್ಗೆ ನಮಗೆ ತಿಳಿದಿದೆ. ಆತನ ಎಲ್ಲಾ ಹಗರಣಗಳನ್ನು ಸಮಯ ಬಂದಾಗ ಬಯಲು ಮಾಡುತ್ತೇನೆ ಎಂದು ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಸಚಿವ ಡಾ.ಕೆ ಸುಧಾಕರ್ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವೆ ವಿಧಾನಸಭಾ ಅಧಿವೇಶನದಲ್ಲಿ ತೀವ್ರವಾದ ವಾಗ್ವಾದ ನಡೆದಿತ್ತು. ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಸಚಿವ ಕೆ. ಸುಧಾಕರ್ ವಿರುದ್ದ ಹಕ್ಕುಚ್ಯುತಿ ಮಂಡಿಸಲು ಕಾಂಗ್ರೆಸ್ ತೀರ್ಮಾನಿಸಿತ್ತು. ರಮೇಶ್ ಕುಮಾರ್ ಅವರು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದು, ಅವರ ವಿರುದ್ದ ಮುಖ್ಯಮಂತ್ರಿಗಳ ಕಾರ್ಯದರ್ಶಿ ರೇಣುಕಾಚಾರ್ಯ ಬೆಂಗಳೂರಿನಲ್ಲಿ ಏಕವಚನದಲ್ಲಿ ಮಾತನಾಡಿದ್ದಾರೆ.
ರಮೇಶ್ ಕುಮಾರ್ ದೊಡ್ಡ ಭ್ರಷ್ಟ ಮಾತ್ರವಲ್ಲ ಕೊಲೆಗಡುಕನೂ ಹೌದು. ಎಷ್ಟು ಜನರನ್ನು ಆತ ಕೊಲೆ ಮಾಡಿಸಿದ್ಧಾನೆ ಎಂಬ ವಿಚಾರದ ಬಗ್ಗರ ನಮಗೆ ತಿಳಿದಿದೆ. ಆ ವಿಚಾರವನ್ನು ಸಮಯ ಬಂದಾಗ ದಾಖಲೆ ಸಮೇತ ಬಯಲು ಮಾಡುತ್ತೇನೆ. ಆ ವಿಚಾರವನ್ನು ಬಯಲು ಮಾಡಿದರೆ ಅವರ ಗೌರವ ಕಡಿಮೆ ಆಗುತ್ತದೆ ಎಂದು ನಾವು ಸುಮ್ಮನಿದ್ದೆವು. ಕಾಂಗ್ರೆಸ್ ನಾಯಕರು ಹಾಗೂ ಜೆಡಿಎಸ್ನವರು ಅಂತವರ ರಕ್ಷಣೆಗೆ ನಿಂತಿರುವುದು ಸರಿಯಲ್ಲ ಎಂದು ಹೇಳಿದರು.
ರಮೇಶ್ ಕುಮಾರ್ ಅಧಿವೇಶನದ ಸಂದರ್ಭ ಬಳಸಿರುವ ಪದದಿಂದ ನಾಡಿನ ಜನರಿಗೆ ಅವಮಾನವಾಗಿದೆ. ಜನರು ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಬೇಕು. ರಮೇಶ್ ಕುಮಾರ್ ದೊಡ್ಡ ಸತ್ಯ ಹರಿಶ್ಚಂದ್ರನಲ್ಲ. ದೊಡ್ಡ ಭ್ರಷ್ಟ ಆತ. ಅವರು ಬಳಸಿರುವ ಪದಗಳಿಗೆ ಸದನದಲ್ಲಿ ಬಹಿರಂಗ ಕ್ಷಮೆ ಕೇಳಬೇಕು. ಸ್ವಲ್ಪವಾದರೂ ಅವರಿಗೆ ಮರ್ಯಾದೆಯಿದ್ದರೆ ತಕ್ಷಣ ಅವರು ರಾಜೀನಾಮೆ ನೀಡಬೇಕು ಎಂದರು.
ನಮಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆದೇಶದಿಂದ ನಮಗೆ ಅನ್ಯಾಯವಾಗಿದೆ. 17 ಶಾಸಕರ ಜೀವನ ಅವರ ಆದೇಶದಿಂದ ಹಾಳಾಗುತ್ತಿತ್ತು. ಷಡ್ಯಂತ್ರ ನಮ್ಮ ವಿರುದ್ದ ನಡೆಸಲಾಗುತ್ತಿತ್ತು ಎಂದು ಮಂಗಳವಾರ ಅಧಿವೇಶನದಲ್ಲಿ ಡಾ.ಕೆ.ಸುಧಾಕರ್ ಪ್ರಸ್ತಾಪಿಸಿದ್ದರು. ವಿರೋಧ ಪಕ್ಷಗಳು ಹಾಗೂ ರಮೇಶ್ ಕುಮಾರ್ ಮಾಜಿ ಸ್ಪೀಕರ್ ಆದೇಶವನ್ನು ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡರು. ಅಲ್ಲದೇ, ಢಾ.ಕೆ. ಸುಧಾಕರ್ ವಿರುದ್ದ ಹಕಗಕುಚ್ಯುತಿ ಮಂಡಿಸಲು ತೀರ್ಮಾನ ಮಾಡಿದ್ದರು. ಡಾ.ಕೆ.ಸುಧಾಕರ್ ಹಾಗೂ ರಮೇಶ್ ಕುಮಾರ್ ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ವಾಗ್ದಾಳಿ ನಡೆಸಿದ್ದರು.