ಕಲಬುರ್ಗಿ, ಮಾ.11 (DaijiworldNews/SM): ಕಲಬುರ್ಗಿಯಲ್ಲಿ ಶಂಕಿತ ಕೊರೊನಾ ಸೋಂಕು ತಗುಲಿದ ವ್ಯಕ್ತಿ ಮೃತಪಟ್ಟ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಸಚಿವ ಶ್ರೀರಾಮುಲು ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಸಚಿವರು ತಮ್ಮ ಟ್ವಿಟರ್ ಖಾತೆಯಲ್ಲಿ, "ಕಲಬುರ್ಗಿಯಲ್ಲಿ ನಿಧನರಾದ ವ್ಯಕ್ತಿಯಲ್ಲಿ, ಕೊವೊಡ್ ೧೯ ಶಂಕಿತರೇ ಹೊರತು ಡೃಢ ಪಟ್ಟಿಲ್ಲ. ನಾಗರಿಕ ಹಿತದೃಷ್ಟಿಯಿಂದ, ಮೃತರ ಅಂತ್ಯಸಂಸ್ಕಾರಕ್ಕಾಗಿ ಕೆಲವೊಂದು ಮುಂಜಾಗೃತ ಕ್ರಮಗಳನ್ನು ಜಿಲ್ಲಾ ಆರೋಗ್ಯ ಇಲಾಖೆಯು ಕೈಗೊಂಡಿದೆ. ಇದರಲ್ಲಿ ಯಾವುದೇ ಅನಗತ್ಯ ಗೊಂದಲ, ಭಯ ಸೃಷ್ಟಿಸುವುದು ಬೇಡ" ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಯಾವುದೇ ವ್ಯಕ್ತಿಗಳಲ್ಲಿ, ಕೊರೊನಾ ವೈರಸ್ ಪತ್ತೆಯಾದ ಬಗ್ಗೆ ಅಧೀಕೃತ ಪ್ರಕರಣಗಳು ದಾಖಲಾಗಿಲ್ಲ. ಇನ್ನು, ಕರ್ನಾಟಕ ರಾಜ್ಯ ಸರಕಾರವು, ಕೊರೊನಾ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ವಿದೇಶದಿಂದ ಬರುವವರನ್ನು ಒಳಗೊಂಡಂತೆ ಶಂಕಿತ ವ್ಯಕ್ತಿಗಳ ಮೇಲೆ ತೀವ್ರ ನಿಗಾ ಇರಿಸಿದೆ.