ಬೆಂಗಳೂರು, ಮಾ. 12 (Daijiworld News/MB) : ರಾಜ್ಯ ಸರಕಾರವು ಕೊರೋನ ವೈರಸ್ ಅನ್ನು ಸಾಂಕ್ರಾಮಿಕ ಪರಿಸ್ಥಿತಿ ಎಂದು ಘೋಷಿಸಿ, ಶಾಲೆಗಳು, ಕಚೇರಿಗಳನ್ನು ಮುಚ್ಚುವಂತೆ ಆದೇಶಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸತ್ಯವಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, "ಸರ್ಕಾರಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಪ್ರತಿದಿನ ನಡೆಸುತ್ತಿರುವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗುತ್ತದೆ. ಈ ವಿಚಾರವಾಗಿ ಸರ್ಕಾರ ಯಾವುದೇ ರಜೆಯನ್ನು ಘೋಷಣೆ ಮಾಡಿಲ್ಲ. ಎಂದಿನಂತೆ ಶಾಲೆಗಳು, ಕಚೇರಿಗಳು, ಇತರ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.
ಹಾಗೆಯೇ ಸರ್ಕಾರದ ಅಧಿಕೃತವಾದ ಹೊರಡಿಸುವ ಆದೇಶಗಳನ್ನು ಮಾತ್ರ ಪರಿಗಣಿಸಿ, ಸುಳ್ಳು ಸುದ್ದಿಗಳು, ವದಂತಿಗಳಿಗೆ ಕಿವಿಕೊಡಬೇಡಿ ಎಂದು ಆಯುಕ್ತರು ತಿಳಿಸಿದ್ದಾರೆ.