ಭೋಪಾಲ್, ಮಾ. 12 (Daijiworld News/MB) : 18 ವರ್ಷಗಳ ಕಾಲ ಕಾಂಗ್ರೆಸ್ನಲ್ಲಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಈಗ ಬೆಜೆಪಿ ಸೇರಿದ್ದು ಸಿಂಧಿಯಾರನ್ನು ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ ಟೀಕೆ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ, ನರೇಂದ್ರ ಮೋದಿಯಾಗಲಿ ಅಥವಾ ಗೃಹ ಸಚಿವ ಅಮಿತ್ ಶಾ ಅವರಾಗಲಿ ಬಿಜೆಪಿಗೆ ಸೇರಿರುವ ಸಿಂಧಿಯಾರನ್ನು ಕನಿಷ್ಠ ಟ್ವೀಟ್ ಮೂಲಕವೂ ಪಕ್ಷಕ್ಕೆ ಸ್ವಾಗತಿಸಿಲ್ಲ. ಇದು ಮಹಾರಾಜನಿಗೆ ಆಗಿರುವ ಅವಮಾನ ಎಂದು ಹೇಳಿದೆ.
ಸಿಂಧಿಯಾಜಿ ಅವರನ್ನು ನರೇಂದ್ರ ಮೋದಿಜಿಯಾಗಲಿ, ಅಮಿತ್ ಜಿ ಆಗಲಿ ಸ್ವಾಗತಿಸಿಲ್ಲ. ಮೋದಿ ಜೀ, ಶಾ ಜೀ ಶೀಘ್ರವಾಗಿ ಸ್ವಾಗತಿಸಬೇಡಿ. ಸಿಂಧಿಯಾ ಅವರು ಬಿಜೆಪಿಗೆ ಸೇರಿ ಈಗ 24 ಗಂಟೆಗಳೇ ಆಗಿಲ್ಲ. ಆಗಲೇ ನೀವು ಅವಮಾನ ಮಾಡುವುದನ್ನು ಆರಂಭಿಸಿದ್ದೀರಿ! ಮಹಾರಾಜರು! ಎಂದು ಟ್ವೀಟ್ ಮಾಡಿದ್ದಾರೆ.
ಜ್ಯೋತಿರಾದಿತ್ಯ ಸಿಂಧಿಯಾ ಗ್ವಾಲಿಯರ್ ರಾಜಮನೆತನದವರಾಗಿದ್ದು 18 ವರ್ಷಗಳ ಕಾಲ ತಾನಿದ್ದ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ.
ಸಿಂಧಿಯಾ ಬಿಜೆಪಿ ಸೇರಿದ ಕೂಡಲೇ ಅವರಿಗೆ ರಾಜ್ಯಸಭಾ ಸೀಟನ್ನು ನೀಡುವ ಆಫರ್ ನೀಡಲಾಗಿದ್ದು ಮಾ.13 ರಂದು ರಾಜ್ಯಸಭಾ ಚುನಾವಣೆಗೆ ಸಿಂಧಿಯಾ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಗುರುವಾರ ಭೋಪಾಲ್ಗೆ ಆಗಮಿಸುವ ಸಾಧ್ಯತೆಯಿದೆ.