ಚೆನ್ನೈ , ಮಾ. 12 (Daijiworld News/MB) : ದೇಶದ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸುವ ಅವಶ್ಯಕತೆಯಿದೆ. ಕೇವಲ ಮತಕ್ಕಾಗಿ ಮಾತ್ರ ರಾಜಕೀಯ ಪಕ್ಷಗಳು ಜನರ ಬಳಿ ತೆರಳುತ್ತದೆ. ರಾಜಕೀಯದಲ್ಲಿ . ಯುವ ಜನತೆ ಹೆಚ್ಚಾಗಿ ಸಕ್ರಿಯವಾಗಬೇಕು ಎಂದು ನಟ ರಜನಿಕಾಂತ್ ಹೇಳಿದರು.
ಚೆನ್ನೈನ ಖಾಸಗಿ ಹೋಟೇಲ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ನನ್ನ ರಾಜಕೀಯ ಊಹಾಪೋಹದ ಬಗ್ಗೆ ಸುದ್ದಿಗಳು ಹರಡುತ್ತಿದೆ. ನನ್ನ ಹೆಸರು ರಾಜಕೀಯದೊಂದಿಗೆ 1996 ರಿಂದಲೂ ನಂಟಾಗಿತ್ತು. 2017 ರಲ್ಲಿ ರಾಜಕೀಯ ಪ್ರವೇಶದ ಕುರಿತಾಗಿ ಊಹಾಪೋಹ ಹರಡಿತ್ತು. ಸಮಯಕ್ಕೆ ಸರಿಯಾಗಿ ಸರ್ಕಾರದ ಕೆಲಸಗಳು ಆಗುವುದಿಲ್ಲ. ಮತಕ್ಕಾಗಿ ಮಾತ್ರ ರಾಜಕೀಯ ಪಕ್ಷಗಳು ಜನರ ಬಳಿ ತೆರಳುತ್ತದೆ ಎಂದು ಅವರ ಹೇಳಿದರು.
ಜಯಲಲಿತಾ ಬಳಿಕ ರಾಜ್ಯದಲ್ಲಿ ಬಳಿಷ್ಟ ನಾಯಕತ್ವದ ಕೊರತೆಯಿದೆ. ವಯಸ್ಸಾದವರೇ ರಾಜಕೀಯದಲ್ಲಿ ಹೆಚ್ಚಾಗಿದ್ದಾರೆ. ನಿವೃತ ಐ.ಪಿ.ಎಸ್ , ಐ.ಎ.ಎಸ್ ಅಧಿಕಾರಿಗಳಿಗೆ ಪಕ್ಷಕ್ಕೆ ಆಹ್ವಾನ ನೀಡಿ ಪಕ್ಷವನ್ನು ಬಲಿಷ್ಠ ಗೊಳಿಸುತ್ತೇನೆ. ಅನಗತ್ಯವಾಗಿ ನನ್ನ ಪಕ್ಷದಲ್ಲಿ ಖರ್ಚು ಮಾಡುವುದಿಲ್ಲ, ಹಾಗೆಯೇ ಕೆಲಸ ನನ್ನ ಪಕ್ಷದಲ್ಲಿ ಮಾಡದವರಿಗೆ ಅವಕಾಶವಿಲ್ಲ ಎಂದರು.
ರಾಜಕೀಯದಲ್ಲಿ ಹೆಚ್ಚಾಗಿ ಯುವ ಜನತೆ ಸಕ್ರಿಯವಾಗಬೇಕು. ಶೇ. 60-65 ರಷ್ಟು ಯುವಜನತೆಗೆ ನನ್ನ ಪಕ್ಷದಲ್ಲಿ ಅವಕಾಶವನ್ನು ನೀಡುತ್ತೇನೆ ಎಂದು ತಿಳಿಸಿದರು.
ಹಾಗೆಯೇ ರಾಜಕೀಯ ರಂಗಕ್ಕೆ ಪ್ರವೇಶಿಸಿದ ಅವರು, ಶೀಘ್ರದಲ್ಲಿ ತಮ್ಮ ರಾಜಕೀಯ ಪಕ್ಷದ ಹೆಸರನ್ನು ಘೋಷಿಸುವುದಾಗಿ ಹೇಳಿದರು.