ನವದೆಹಲಿ, ಮಾ. 12 (Daijiworld News/MB) : ಯಾವ ಸಮಯದಲ್ಲಾದರೂ ನನ್ನನ್ನು ಭೇಟಿಯಾಗುವ ಅವಕಾಶವಿದ್ದ ಏಕೈಕ ಕಾಂಗ್ರೆಸ್ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಅವರಾಗಿದ್ದರು ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ.
ಈ ಮೊದಲು, ರಾಹುಲ್ ಗಾಂಧಿಯವರನ್ನು ಭೇಟಿಯಾಗಲು ಜ್ಯೋತಿರಾಧಿತ್ಯ ಸಿಂಧಿಯಾ ಅವರು ಹಲವು ಭಾರೀ ಪ್ರಯತ್ನಿಸಿದ್ದು ಅವರಿಗೆ ಅನುಮತಿ ನಿರಾಕಾರಿಸಲಾಗಿತ್ತು ಎಂದು ಹೇಳಲಾಗುತ್ತಿರುವ ಹಿನ್ನಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.
"ಯಾವುದೇ ಸಮಯದಲ್ಲಾದರೂ ಅವರಿಗೆ ನನ್ನ ಮನೆಗೆ ಬರುವ ಎಲ್ಲಾ ಅವಕಾಶಗಳಿತ್ತು. ಆದರೆ ಅದು ಈಗ ಮುಗಿದು ಹೋದ ವಿಷಯ" ಎಂದಿದ್ದಾರೆ.
ಹಾಗೆಯೇ ರಾಹುಲ್ ಗಾಂಧಿಯವರು ಒಂದು ವರ್ಷದ ಹಿಂದೆ ಕಮಲನಾಥ್ ಹಾಗೂ ಜ್ಯೋತಿರಾಧಿತ್ಯ ಸಿಂಧಿಯಾರೊಂದಿಗೆ ಮುಖ್ಯಮಂತ್ರಿ ಪದವಿ ವಿಷಯದಲ್ಲಿ ನಡೆಸಿದ ಶಾಂತಿ ಮಾತುಕತೆಯ ಟ್ವೀಟ್ನ್ನು ರೀಟ್ವೀಟ್ ಮಾಡಿದ್ದಾರೆ.
ಅದರಲ್ಲಿ "ಇಬ್ಬರು ಶಕ್ತಿಶಾಲಿ ಯೋಧರೆಂದರೇ ತಾಳ್ಮೆ ಹಾಗೂ ಸಮಯ" ಎಂದು ಬರೆಯಲಾಗಿದೆ.
ಕಾಂಗ್ರೆಸ್ ತೊರೆದಿರುವ ಜ್ಯೋತಿರಾಧಿತ್ಯ ಸಿಂಧಿಯಾ ಈಗಾಗಲೇ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಜತೆಗೆ ಮಾ.22 ರಂದು ಮಧ್ಯಪ್ರದೇಶದಿಂದ ನಡೆಯಲಿರುವ ರಾಜ್ಯಸಭೆ ಉಪಚುನಾವಣೆಯಲ್ಲಿ ಅಭ್ಯರ್ಥಿಯಾಗಿಯೂ ಆಯ್ಕೆಯಾಗಿದ್ದು ಮಾರ್ಚ್ 13 ರಂದು ನಾಮಪತ್ರ ಸಲ್ಲಿಸಲಿದ್ದಾರೆ.