ಮುಂಬೈ, ಮಾ.12 (DaijiworldNews/PY) : ಫೆ.19ರಂದು ನಡೆಯುವ ಛತ್ರಪತಿ ಶಿವಾಜಿ ಜನ್ಮ ದಿನಾಚರಣೆ ಹಿನ್ನೆಲೆ ಮುಂಬೈ ಮೂಲದ ಅನಿಮೇಷನ್ ಆರ್ಟಿಸ್ಟ್ ಆಗಿರುವ ನಿತಿನ್ ಕಾಂಬ್ಳೆ ಅವರು 10X8 ಅಡಿ ಉದ್ದದ ಬೃಹತ್ ಭಾವಚಿತ್ರವನ್ನು ರಚಿಸಿ ವಿಶ್ವ ದಾಖಲೆ ಬರೆದಿದ್ದಾರೆ.
ನಿತಿನ್ ಕಾಂಬ್ಳೆ ಅವರು ಆರು ಬಣ್ಣಗಳಿಂದ ಕೂಡಿರುವ 46,080 ಪ್ಲಾಸ್ಟಿಕ್ ತುಂಡುಗಳನ್ನು ಬಳಸಿಕೊಂಡು ಛತ್ರಪತಿ ಶಿವಾಜಿ ಮಹಾರಾಜ ಅವರ ಸುಂದರ ಭಾವಚಿತ್ರವನ್ನು 10 ದಿನಗಳಲ್ಲಿ ರಚಿಸಿದ್ದು. ಹೊಸ ದಾಖಲೆ ಸೃಷ್ಠಿಸಿದ್ಧಾರೆ.
ಈ ಬಗ್ಗೆ ಮಾತನಾಡಿದ ನಿತಿನ್ ಕಾಂಬ್ಳೆ ಅವರು, ಪ್ಲಾಸ್ಟಿಕ್ ಬಳಕೆಯನ್ನು ದೇಶದಲ್ಲಿ ನಿಷೇಧಿಸಲಾಗುತ್ತಿದೆ. ಈ ನಡುವೆ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಯತೇಚ್ಛವಾಗಿ ಬಳಕೆಯಾಗುತ್ತಿದೆ. ನನಗೆ ಆಗ ಛತ್ರಪತಿ ಶಿವಾಜಿ ಅವರ ಭಾವಚಿತ್ರ ರಚನೆಯ ಉಪಾಯ ಬಂತು ಎಂದು ತಿಳಿಸಿದ್ಧಾರೆ.
ನಿತಿನ್ ಅವರು ಖಾಸಗಿ ಕಂಪೆನಿಯಲ್ಲಿ ಹೈಟೆಕ್ ಅನಿಮೇಷನ್ ಉದ್ಯೋಗಿಯಾಗಿದ್ದು, ದಿನವಿಡೀ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿವಾಜಿ ಭಾವಚಿತ್ರ ರಚನೆಯ ಮೇಲೆ ರಾತ್ರಿ ವೇಳೆ ಲಕ್ಷ್ಯ ವಹಿಸುತ್ತಿದ್ದರು. ಭುವನೇಶ್ವರ್ನಿಂದ ಶಿವಾಜಿ ಭಾವಚಿತ್ರ ರಚಿಸಲು ಕಚ್ಚಾವಸ್ತುಗಳನ್ನು ತರಿಸಿಕೊಂಡಿದ್ದರು. ಇದೀಗ ಈ ಪರಿಶ್ರಮಕ್ಕೆ ಪ್ರತಿಫಲ ದೊರೆತಿದೆ. ನಾನು ರಚಿಸಿದ ಶಿವಾಜಿ ಭಾವಚಿತ್ರವು ವಿಶ್ವ ದಾಖಲೆಗಳ ಪಟ್ಟಿಗೆ ಸೇರ್ಪಡೆಯಾಗಿದೆ ಎಂದು ನಿತಿನ್ ಸಂತೋಷಗೊಂಡಿದ್ಧಾರೆ.