ಶಿವಮೊಗ್ಗ, ಮಾ.12 (DaijiworldNews/PY) : "ಕೋಳಿಯಿಂದಾಗಿ ಕೊರೊನಾ ವೈರಸ್ ಬರುತ್ತೋ ಬಿಡುತ್ತೋ ನನಗೆ ಗೊತ್ತಿಲ್ಲ. ಆದರೆ ನಾನು ದಿನಾಲು ತಿನ್ನುತ್ತಿದ್ದೇನೆ, ಕಳೆದ ಮೂರು ದಿನಗಳಿಂದ ತಿನ್ನುತ್ತಿದ್ದೇನೆ" ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ಧಾರೆ.
ನಗರದಲ್ಲಿ ಮಾತನಾಡಿದ ಅವರು, "ಎಲ್ಲರೂ ಕೋಳಿಯಿಂದ ಕೊರೊನಾ ಬರುವುದಿಲ್ಲ ಎಂದು ಹೇಳುತ್ತಿದ್ಧಾರೆ. ಆದರೆ, ಕೋಳಿ ಬೆಲೆ ವಿಪರೀತ ಕಡಿಮೆಯಾಗಿದೆ. ಅಲ್ಲದೇ ನಾವು ಕೋಳಿ ತಿನ್ನುವವರು, ನನಗೆ ಕೋಳಿ ಬೆಲೆ ಗೊತ್ತಿಲ್ಲ. ನಮಗೆ ಹೇಗೆ ಗೊತ್ತು" ಎಂದು ಕೋಳಿ ತಿನ್ನದವರನ್ನು ಕೇಳಿದ್ದಾರೆ.
"ಕೊರೊನಾ ವೈರಸ್ ಕೋಳಿಯಿಂದಾಗಿ ಬರುತ್ತೋ, ಬಿಡುತ್ತೋ ನನಗೆ ತಿಳಿದಿಲ್ಲ. ಆದರೆ, ದಿನಾಲು ನಾನು ತಿನ್ನುತ್ತಿದ್ದೇನೆ. ಕಳೆದ ಮೂರು ವಾರಗಳಿಂದ ನಾನು ಕೋಳಿ ತಿನ್ನುತ್ತಿದ್ದೇನೆ. ಆದರೆ, ಇಂದು ಸಂಕಷ್ಟ ಚತುರ್ಥಿ ಇರುವ ಕಾರಣದಿಂದ ತಿನ್ನುತ್ತಿಲ್ಲ" ಎಂದು ನಗುತ್ತಾ ಹೇಳಿದರು.
"ಕೊರೊನಾದ ಕಾರಣದಿಂದಾಗಿ ಕೋಳಿ ಮಾಂಸ ತಿನ್ನುವವರ ಸಂಖ್ಯೆ ಇಳಿಕೆಯಾಗಿರುವ ಹಿನ್ನೆಲೆ ಕುಕ್ಕುಟೋದ್ಯಮಕ್ಕೆ ಭಾರಿ ನಷ್ಟವಾಗಿದೆ. ಮೂರು ದಿನದಿಂದಲೂ ನಾನು ಕೋಳಿ ತಿನ್ನುತ್ತಿದ್ದೇನೆ, ಕೊರೊನಾ ಕೋಳಿಯಿಂದ ಹರಡಲ್ಲ" ಎಂದು ತಮಾಷೆಯಾಗಿ ತಿಳಿಸಿದರು.