ನವದೆಹಲಿ, ಮಾ13 ( Daijiworld News/MSP): ಕೊರಾನಾ ಪೀಡಿತ ದೇಶ ಇರಾನ್ ನಿಂದ ಸುಮಾರು 120 ಭಾರತೀಯರನ್ನು ಶುಕ್ರವಾರ ಏರ್ ಇಂಡಿಯಾ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗುವುದು. ಆ ಬಳಿಕ ಅವರನ್ನು ರಾಜಸ್ತಾನದ ಜೈಸಲ್ಮರ್ ನಲ್ಲಿ ನಿರ್ಮಿಸಲಾಗಿರುವ ಸೇನಾ ಕೇಂದ್ರದ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗುವುದು ಎಂದು ತಿಳಿದುಬಂದಿದೆ.
ದಕ್ಷಿಣ ಕಮಾಂಡರ್ ಅವರ ರಕ್ಷಣೆಯಲ್ಲಿ ಭಾರತೀಯ ಸೇನೆ ಕೇಂದ್ರಗಳಲ್ಲಿ ಇರಾನ್ ನಿಂದ ಬಂದ ಭಾರತೀಯರನ್ನು ಸ್ವಲ್ಪ ದಿನಗಳ ಕಾಲ ಇರಿಸಲಾಗುತ್ತದೆ. ವಿಮಾನ ನಿಲ್ದಾಣದಿಂದ ಈ ನಾಗರಿಕರನ್ನು ಕೊರೊನಾ ವೈರಸ್ ಅವರಿಗೆ ತಗುಲಿದೆಯೇ ಎಂದು ಪತ್ತೆಹಚ್ಚಲು ಆರಂಭಿಕ ತಪಾಸಣೆ ನಂತರ ಈ ಸೇನಾ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗುವುದು ಎಂದು ರಕ್ಷಣಾ ಇಲಾಖೆ ವಕ್ತಾರ ಕರ್ನಲ್ ಸೊಂಬಿತ್ ಘೋಷ್ ತಿಳಿಸಿದ್ದಾರೆ.
ಮಾರ್ಚ್ 14 ರ ಬಳಿಕ ಉಳಿದ 250 ಜನರು ಇರಾನ್ ನಿಂದ ಭಾರತಕ್ಕೆ ಕರೆತರಲಾಗುದು. ಇವರನ್ನು ಕೂಡ ಜೈಸಲ್ಮೇರ್ ಕೇಂದ್ರದಲ್ಲೆ ತಪಾಸಣೆಗೊಳಪಡಿಸಲಾಗುವುದು ಎಂದು ವರದಿ ತಿಳಿಸಿದೆ
ಭಾರತದ ರಕ್ಷಣಾ ಸಚಿವಾಲಯ ಈಗಾಗಲೇ ಕೊರೊನಾ ಮಹಾಮಾರಿ ಆವರಿಸಿರುವ ದೇಶಗಳಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನದಲ್ಲಿದೆ. ಮಾತ್ರವಲ್ಲದೆ ಇವರ ರಕ್ಷಣೆಗಾಗಿ ಜೋಧ್ ಪುರ್, ಜಾನ್ಸಿ, ಕೊಲ್ಕತ್ತಾ, ಚೆನ್ನೈ, ಸೂರತ್ ಘಢ್, ಮುಂತಾದ ಕಡೆ ವಿಶೇಷ ಕೇಂದ್ರಗಳನ್ನು ತೆರಯಲಾಗಿದೆ.