ನವದೆಹಲಿ, ಮಾ13 ( Daijiworld News/MSP): ದೇಶದಲ್ಲಿ ಕೊರೊನಾ ವೈರಸ್ ವೇಗವಾಗಿ ಹಬ್ಬುತ್ತಿದ್ದು, ಕರ್ನಾಟಕ, ಕೇರಳ, ಮಹಾರಾಷ್ಟ್ರದಲ್ಲಿ ಶುಕ್ರವಾರ ಕೂಡ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದೆ, ಹೀಗಾಗಿ ಒಟ್ಟಾರೆ ಭಾರತದಲ್ಲಿ ಕೊರೊನಾ ವೈರಾಣು ಪೀಡಿತರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ. ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಹಾಯವಾಣಿ ಸಂಖ್ಯೆಯನ್ನು ಭಾರತ ಸರ್ಕಾರ ಬಿಡುಗಡೆ ಮಾಡಿದ್ದು, ಅಗತ್ಯ ಬಿದ್ದಲ್ಲಿ ಇದರ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.
ಇನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕೃತ ವೆಬ್ಸೈಟ್ನಲ್ಲಿ ಹಾಕಲಾಗಿರುವ ಪಟ್ಟಿಯ ಪ್ರಕಾರ, ರಾಷ್ಟ್ರ ರಾಜಧಾನಿಯ ಜನರು ಸಹಾಯಕ್ಕಾಗಿ 011-22307145 ಅನ್ನು ಡಯಲ್ ಮಾಡಬಹುದು. ಕನ್ನಡಿಗರು 104 ಸಂಖ್ಯೆಗೆ ಕರೆ ಮಾಡಿ ಅಗತ್ಯ ನೆರವು ಪಡೆಯಬಹುದು.
ಆಯಾ ರಾಜ್ಯಗಳ ಸಹಾಯವಾಣಿ ವಿವರ ಹೀಗಿದೆ.
ಆಂದ್ರ ಪ್ರದೇಶ - 0866-2410978
ಅರುಣಾಚಲ ಪ್ರದೇಶ-9436055743
ಅಸ್ಸಾಂ-6913347770
ಛತ್ತಿಸ್ ಘಡ್-07712235091
ನವದೆಹಲಿ-01122307145
ಹರ್ಯಾಣ-8558893911
ಜಮ್ಮು-01912520982
ಕಾಶ್ಮೀರ-01942440283
ಕೇರಳ-04712552056
ಲಡಾಕ್- 01982256462
ಮಧ್ಯಪ್ರದೇಶ- 0755-2527177
ಮಹಾರಾಷ್ಟ್ರ- 020-26127394
ನಾಗಾಲ್ಯಾಂಡ್- 7005539653
ಒಡಿಶಾ-9439994859
ರಾಜಸ್ಥಾನ್-01412225624
ತಮಿಳುನಾಡು-04429510500
ತ್ರಿಪುರಾ-03812315879
ಉತ್ತರಪ್ರದೇಶ-18001805145
ಪಶ್ಚಿಮ ಬಂಗಾಳ-3323412600
ಅಂಡಮಾನ್ ಮತ್ತು ನಿಕೋಬಾರ್ -03192232102
ಬಿಹಾರ, ಗೋವಾ, ಗುಜರಾತ್, ಹಿಮಾಚಲಪ್ರದೇಶ, ಜಾರ್ಖಂಡ್ , ಕರ್ನಾಟಕ, ಪಂಜಾಬ್, ಸಿಕ್ಕಿಂ, ತೆಲಂಗಾಣ, ಉತ್ತರಖಾಂಡ್, ದಾದ್ರ ಮತ್ತು ಹವೇಲಿ, ದಿಯು ಮತ್ತು ದಾಮನ್, ಲಕ್ಷದೀಪ, ಪುದುಚೇರಿ ಜನರು 104 ಸಂಖ್ಯೆಗೆ ಕರೆ ಮಾಡಿ ಅಗತ್ಯ ನೆರವು ಪಡೆಯಬಹುದು.
ಮೇಘಾಲಯ ಮತ್ತುಯ ಮಿಜೋರಾಂ ಜನರು 108 ಮತ್ತು 102 ಸಂಖ್ಯೆ ಗೆ ಕರೆ ಮಾಡಿ ಸಹಾಯ ಪಡೆಯಬಹುದು.