ನವದೆಹಲಿ, ಮಾ.13 (DaijiworldNews/PY) : ಕೊರೊನಾ ವೈರಸ್ ವಿರುದ್ದ ಕಠಿಣವಾದ ಕ್ರಮ ತೆಗೆದುಕೊಳ್ಳದಿದ್ದರೆ ದೇಶದ ಜನರು ಹಾಗೂ ದೇಶದ ಆರ್ಥಿಕ ವ್ಯವಸ್ಥೆ ಸರ್ವನಾಶವಾಗುತ್ತದೆ. ಇಷ್ಟೊಂದು ಅನಾಹುತ ದೇಶದಲ್ಲಿ ಸಂಭವಿಸಿದರೂ ಕ್ರಮ ತೆಗೆದುಕೊಳ್ಳದ ಕೇಂದ್ರ ಸರ್ಕಾರಕ್ಕೆ ಮಂಕು ಕವಿದಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ತಾವು ಗುರುವಾರ ಮಾಡಿದ್ದ ಟ್ವೀಟ್ ಅನ್ನು ಶುಕ್ರವಾರವೂ ಪುನಃ ಟ್ಯಾಗ್ ಮಾಡಿದ್ದು, ದೇಶದಾದ್ಯಂತ ಕೊರೊನಾ ವೈರಸ್ ಬೃಹದಾಕಾರವಾಗಿ ಕಾಣಿಸಿಕೊಂಡಿದೆ. ಈ ಸಮಸ್ಯೆಗೆ ಪರಿಹಾರ ತಿಳಿದುಕೊಳ್ಳದಿದ್ದರೆ, ಭಾರತದ ಆರ್ಥಿಕ ವ್ಯವಸ್ಥೆ ಸರ್ವನಾಶವಾಗುತ್ತದೆ ಎಂದು ತಿಳಿಸಿದ್ದಾರೆ.
ಇದು ನಮ್ಮ ಅರ್ಥವ್ಯವಸ್ಥೆಯ ಹಾಗೂ ನಮ್ಮ ಜನರ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಇದು ನಮ್ಮ ಜನರಿಗೆ ಹಾಗೂ ನಮ್ಮ ಅರ್ಥವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಕೂಡಲೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.