ನವದೆಹಲಿ, ಮಾ.13 (DaijiworldNews/PY) : ಖಾಸಗಿ ಬ್ಯಾಂಕುಗಳಲ್ಲಿರುವ ನಿಮ್ಮ ಠೇವಣಿಗಳು ಸುರಕ್ಷಿತವಾಗಿರಲಿವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಿಗೆ ಈ ಹಣವನ್ನು ವರ್ಗಾಯಿಸಬೇಡಿ ಎಂದು ಆರ್.ಬಿ.ಐ ಮನವಿ ಮಾಡಿದೆ.
ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಈ ವಿಚಾರವಾಗಿ ಆರ್.ಬಿ.ಐ ಸುತ್ತೋಲೆ ಹೊರಡಿಸಿದ್ದು, ನೀವು ಖಾಸಗಿ ಬ್ಯಾಂಕ್ಗಳಲ್ಲಿ ಇರಿಸಿರುವ ಹಣವನ್ನು ವರ್ಗಾವಣೆ ಮಾಡಿದರೆ, ಹಣಕಾಸು ಕ್ಷೇತ್ರದ ಸ್ಥಿರತೆ ಮತ್ತು ಬ್ಯಾಂಕಿಂಗ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾಗಿ ಇಂತಂಹ ತೀರ್ಮಾನಗಳನ್ನು ತೆಗೆದುಕೊಳ್ಳಬೇಡಿ ಎಂದು ತಿಳಿಸಿದೆ.
ಭಾರಿ ಪ್ರಮಾಣದಲ್ಲಿ ಖಾಸಗಿ ಬ್ಯಾಂಕ್ಗಳಲ್ಲಿನ ಠೇವಣಿಗಳು ದುರುಪಯೋಗ ಆಗುತ್ತಿರುವುದರ ಬಗ್ಗೆ ಆರ್.ಬಿ.ಐ ಆತಂಕ ವ್ಯಕ್ತಪಡಿಸಿದ್ದು, ಬ್ಯಾಂಕಿಂಗ್ ವ್ಯವಸ್ಥೆಯನ್ನು ಇದು ಅಸ್ಥಿರಗೊಳಿಸುತ್ತದೆ ಎಂದೂ ಹೇಳಿದೆ. ಆರ್.ಬಿ.ಐಗೆ ಖಾಸಗಿ ಬ್ಯಾಂಕ್ಗಳನ್ನು ನಿಯಂತ್ರಿಸುವ ವಿಶೇಷ ಅಧಿಕಾರವಿದೆ. ಆ ಅಧಿಕಾರವನ್ನು ಉಪಯೋಗಿಸಲಾಗುವುದು. ಹಾಗಾಗಿ ನಿಮ್ಮ ಠೇವಣಿ ಸುರಕ್ಷಿತವಾಗಿದ್ದು, ಯಾವುದೇ ಕಾರಣಕ್ಕೂ ವರ್ಗಾಯಿಸಬೇಡಿ ಎಂದು ಮನವಿ ಮಾಡಿದೆ.