ನವದೆಹಲಿ, ಮಾ.13 (DaijiworldNews/PY) : "ಒಂದು ಕೋಟಿ ಜನಸಂಖ್ಯೆಯಿರುವ ನಗರಗಳಲ್ಲಿ ಮಹಿಳೆಯರಿಗಾಗಿ ಪಿಂಕ್ ಬಸ್ಗಳನ್ನು ಪರಿಚಯಿಸಲಾಗುವುದು" ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಈ ಬಗ್ಗೆ ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾಹಿತಿ ನೀಡಿದ ಅವರು, "ಕೆಲವು ನಗರಗಳಲ್ಲಿ ಈಗಾಗಲೇ ಪಿಂಕ್ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಯಶಸ್ವಿಯಾಗಿ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.
"ನೂತನವಾಗಿ ತಯಾರಿಸುವ ಬಸ್ಗಳಲ್ಲಿ ಪ್ಯಾನಿಕ್ ಬಟನ್ ಹಾಗೂ ಸಿಸಿ ಕ್ಯಾಮೆರಾ ಅಳವಡಿಸುವಂತೆ ಕಂಪೆನಿಗಳಿಗೆ ನಿರ್ದೇಶನ ನೀಡಲಾಗಿದೆ. ಈ ಬಸ್ಗಳಲ್ಲಿ ಪ್ರಯಾಣಿಕರು ಸೇರಿದಂತೆ ಚಾಲಕ, ಕಂಡಕ್ಟರ್ ಕೂಡಾ ಮಹಿಳೆಯೇ ಇರುತ್ತಾರೆ. ಎಲ್ಲಾ ರಾಜ್ಯಗಳಿಗೆ ದ್ವಿಚಕ್ರ, ತ್ರಿಚಕ್ರ ಎಲೆಕ್ಟ್ರಿಕ ವಾಹನಗಳ ಖರೀದಿಗೆ ವಿನಾಯಿತಿ ನೀಡುವಂತೆ ಸಲಹೆ ನೀಡಲಾಗಿದೆ. ಈ ಎಲೆಕ್ಟ್ರಿಕ್ ವಾಹನಗಳನ್ನು ಮಹಿಳೆಯರು ಕೂಡ ಚಲಾಯಿಸಬಹುದಾಗಿದೆ" ಎಂದು ಹೇಳಿದ್ದಾರೆ.