ನವದೆಹಲಿ, ಮಾ.13 (DaijiworldNews/PY) : ಶೇ.4ರಷ್ಟು ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಲು ಶುಕ್ರವಾರ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ ಪ್ರಚಲಿತದಲ್ಲಿರುವ ತುಟ್ಟಿಭತ್ಯೆ ಶೇ 17ರಿಂದ 21ಕ್ಕೆ ಏರಿಕೆಯಾಗಲಿದ್ದು, ಈ ವರ್ಷದ ಜನವರಿ ಒಂದರಿಂದ ಹೆಚ್ಚಳವು ಜಾರಿಗೆ ಬರಲಿದೆ.
ಇದರ ಅನುಕೂಲವನ್ನು ಕೇಂದ್ರ ಸರ್ಕಾರದ 48 ಲಕ್ಷ ನೌಕರರು ಹಾಗೂ 65 ಲಕ್ಷ ಪಿಂಚಣಿದಾರರು ಪಡೆಯಲಿದ್ದಾರೆ. ಸರ್ಕಾರಕ್ಕೆ ತುಟ್ಟಿಭತ್ಯೆ ಹೆಚ್ಚಳದಿಂದ ಹೆಚ್ಚುವರಿಯಾಗಿ 14,595 ಕೋಟಿ ಖರ್ಚಾಗಲಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ