ವಡೋದರ, ಮಾ. 14 (Daijiworld News/MB) : 1.2 ಲಕ್ಷ ನಗದು, 1 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ವ್ಯಕ್ತಿಯೋರ್ವನ ಎರಡನೇ ಪತ್ನಿ ಮೊದಲ ಪತಿಯೊಂದಿಗೆ ಪರಾರಿಯಾದ ಘಟನೆ ಗುಜರಾತ್ನ ವಡೋದರದಲ್ಲಿ ನಡೆದಿದೆ.
ಯಾಕೂತ್ಪುರ ನಿವಾಸಿ ಮೊಹಮ್ಮದ್ ಶಾಕೀಲ್ ಮನ್ಸೂರಿ ತನ್ನ ಎರಡನೇ ಪತ್ನಿ ಇರಾಮ್ ಮೊದಲ ಪತಿಯೊಂದಿಗೆ ಪರಾರಿಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ.
ಫೆ.6 ರಂದು ಆಕೆಯು ನಾಪತ್ತೆಯಾಗಿದ್ದು ಮನ್ಸೂರಿ ಹುಡುಕಾಟ ನಡೆಸಿದ್ದಾನೆ. ಆ ಸಂದರ್ಭದಲ್ಲಿ ನೆರೆಮನೆಯವರು ಇರಾಮ್ ಕಾರಿನಲ್ಲಿ ಪುರುಷನೊಂದಿಗೆ ತೆರಳಿದ್ದನ್ನು ನೋಡಿದ್ಧೇನೆ ಎಂದು ತಿಳಿಸಿದ್ದಾರೆ. ಮನ್ಸೂರಿ ಆಕೆಗೆ ಕರೆ ಮಾಡಿದ್ದು ಮೊಬೈಲ್ ಸ್ವಿಚ್ಆಫ್ ಆಗಿತ್ತು. ಆಕೆ ತನ್ನ ಮೊದಲ ಪತಿಯೊಂದಿಗೆ ಹೋಗಿರಬಹುದು ಎಂದು ಮನ್ಸೂರಿಗೆ ಅನುಮಾನ ಉಂಟಾಗಿತ್ತು.
ಇರಾಮ್ 2019ರಲ್ಲಿ ಮನ್ಸೂರಿಯನ್ನು ವಿವಾಹವಾಗಿದ್ದು ಆ ಬಳಿಕವೂ ತನ್ನ ಮೊದಲ ಪತಿಯೊಂದಿಗೆ ಸಂಪರ್ಕ ಹೊಂದಿದ್ದಳು ಎಂದು ವರದಿಯಾಗಿದೆ.
ಮನ್ಸೂರಿ ಮನೆಗೆ ಬಂದು ಪರಿಶೀಲನೆ ನಡೆಸಿದಾಗ ಇರಾಮ್ 1.2 ಲಕ್ಷ ನಗದು, 1 ಲಕ್ಷ ಮೌಲ್ಯದ ಚಿನ್ನಾಭರಣ ಇಲ್ಲದಿರುವುದು ಎಂದು ತಿಳಿದು ಬಂದಿದೆ.
ಆ ಬಳಿಕ ಮನ್ಸೂರಿ ಆಕೆಯನ್ನು ಹಿಂದಕ್ಕೆ ಕರೆತರಲೆಂದು ಇಂದೋರ್ನಲ್ಲಿರುವ ತನ್ನ ಎರಡನೇ ಪತ್ನಿಯ ಮೊದಲ ಪತಿ ಶಾಬ್ಬುದ್ದೀನ್ ಮನೆಗೆ ತೆರಳಿದ್ದು ಆಕೆ ವಾಪಾಸ್ ಆಗಲು ಒಪ್ಪಲಿಲ್ಲ. ಇರಾಮ್ನ ಪೋಷಕರು ಕೂಡಾ ಮನ್ಸೂರಿಯೊಂದಿಗೆ ತೆರಳುವಂತೆ ಹೇಳಿದ್ದು ಆಕೆ ಅದಕ್ಕೂ ಕೂಡಾ ಒಪ್ಪದೆ, ತನ್ನ ಮೊದಲನೇ ಪತಿಯನ್ನು ಈಗಲೂ ಪ್ರೀತಿಸುತ್ತಿರುವುದಾಗಿ ತಿಳಿಸಿದ್ದಾಳೆ.
ಇರಾಮ್ ವಾಪಸ್ ಆಗಲು ಒಪ್ಪದ ಹಿನ್ನಲೆಯಲ್ಲಿ ಮನ್ಸೂರಿ, ಇರಾಮ್ ಹಾಗೂ ಆಕೆಯ ಮೊದಲ ಪತಿಯ ಮೇಲೆ ಮೋಸ ಮಾಡಿದ ಕುರಿತಾಗಿ ಪ್ರಕರಣ ದಾಖಲಿಸಿದ್ದಾನೆ.
ಮನ್ಸೂರಿಗೆ ತನ್ನ ಮೊದಲ ಪತ್ನಿಯಿಂದ ಮಕ್ಕಳಾಗದ ಕಾರಣದಿಂದಾಗಿ ಎಲ್ಲಾ ಸಂಬಂಧಿಕರ ಒಪ್ಪಿಗೆ ಪಡೆದು ತನ್ನ ನಾದಿನಿಯ ಪುತ್ರಿ ಇರಾಮ್ನನ್ನು ನವೆಂಬರ್ನಲ್ಲಿ ವಿವಾಹವಾಗಿದ್ದನು.